ಉಡುಪಿ,(ಮಾರ್ಚ್ 4): ಭಾರತದ ಆಧುನಿಕ ರಂಗಭೂಮಿ ಕ್ಷೇತ್ರದಲ್ಲಿ ಮಹಾರಂಗ ಪ್ರಯೋಗಕ್ಕೆ, ಭಾರತದ ಸರ್ವಶ್ರೇಷ್ಠ ಕಾದಂಬರಿಕಾರ, ಸರಸ್ವತಿ ಸಮ್ಮಾನ ಪುರಸ್ಕೃತ, ಪದ್ಮಶ್ರೀ ಡಾ.ಎಸ್.ಎಲ್ ಭೈರಪ್ಪನವರು 42 ವರ್ಷಗಳ ಹಿಂದೆ ಬರೆದ ಮಹಾಭಾರತ ವಸ್ತುವಿನ ಪರ್ವ ಕಾದಂಬರಿ ಅಣಿಯಾಗಿದೆ.
ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ಈ ಪ್ರಯೋಗಕ್ಕೆ ಸಹಕಾರ ನೀಡಿದ್ದು, ಮಾರ್ಚ್ 12, 13 ಮತ್ತು 14 ರಂದು ಮೈಸೂರು ಕಲಾಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಲು ರಂಗಾಯಣದ ವೆಬ್‌ಸೈಟ್ www.rangayana.org ಅನ್ನು ಸಂಪರ್ಕಿಸುವoತೆ ರಂಗಾಯಣದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.