ಪಶ್ಚಿಮ ಘಟ್ಟದ ಮಹತ್ವ ಮತ್ತು ಭೂಕುಸಿತ ಗಳಿಂದ ಮಳೆಕಾಡು ನಾಶವಾಗುವ ಸಮಸ್ಯೆಗಳ ಬಗ್ಗೆ ಬೆಟ್ಟದ ಅಟ್ಟದಲ್ಲಿ ಒಂದಷ್ಟು ಮಾಹಿತಿ. ಯುವ ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಪಶ್ಚಿಮಘಟ್ಟದ ಮಾಹಿತಿ ನೀಡಿ ಆದು ಅರ್ಥ ಆಗಬೇಕಾದರೆ ಪಶ್ಚಿಮ ಘಟ್ಟದ ಕಾಡಿಗೆ, ಬೆಟ್ಟಕ್ಕೆ, ನದೀ ಮೂಲದ ಪ್ರದೇಶಗಳಿಗೆ ಕರೆದು ಕೊಂಡು ಹೋಗಿ ನೈಜ ಪರಿಸರ ಪಾಠ ಆಗಬೇಕು ಹೊರತು ನಾಕು ಗೋಡೆಯ ನಡುವೆ ಪಾಠ ಮಾಡಿದರೆ ಅದರ ಸಹಜ ಚಿತ್ರಣ ಅರ್ಥವಾಗದು. ಇತ್ತೀಚೆಗಿನ ವಿದ್ಯಾರ್ಥಿಗಳು ಎಲ್ಲೋ ಒಂದು ಕಡೆ ಪ್ರಕೃತಿ, ಕಾಡು, ನದಿ...ಗಳ ಬಗ್ಗೆ ದೂರ ಆಗುತ್ತಾ ಭೂಕುಸಿತ, ಜಲ ಪ್ರವಾಹ, ಬರಗಾಲಕ್ಕೂ ನಮ್ಮ ನಗರಕ್ಕೂ ಏನೂ ಸಂಬಂಧ ಇಲ್ಲಾ ಎನ್ನುವಂತೆ ಮೊಬೈಲ್ ದಾಸರಾಗುತ್ತಾ ಇರುವುದು ಕೂಡಾ ಭವಿಷ್ಯದ ಹಿತದೃಷ್ಟಿಯಿಂದ ಒಳಿತಲ್ಲ. ಬೆರೆಯಬೇಕು ನಿಸರ್ಗದೊಂದಿಗೆ, ಅರಿಯಬೇಕು ಅದರ ಒಳ ಹೂರಣವನ್ನು, ಪಶ್ಚಿಮ ಘಟ್ಟ ನಮ್ಮ ನಿಮ್ಮೆಲ್ಲರ ಬದುಕಿನ ಚೇತನಾ ಶಕ್ತಿ, ಅದನ್ನು ಉಳಿಸುವ ಜವಾಬ್ದಾರಿ ಕೂಡಾ ನಮ್ಮ, ನಿಮ್ಮೆಲ್ಲರ ಕರ್ತವ್ಯ. ಸರಕಾರ ಮತ್ತು ರಾಜಕಾರಣಿಗಳು ಈ ಕರ್ತವ್ಯ ಮಾಡುತ್ತಾರೆ ಅಂತ ಸುಮ್ಮನಿದ್ದರೆ ಇಡೀ ಪಶ್ಚಿಮ ಘಟ್ಟವನ್ನು ಇನ್ನು ಕೆಲವೇ ವರ್ಷಗಳಲ್ಲಿ ಸರ್ವ ನಾಶ ಮಾಡಿ ಬಿಡುತ್ತಾರೆ ಅದಕ್ಕೆ ಸಂಶಯವೇ ಇಲ್ಲಾ...

ಮಂಗಳೂರಿನ ಚೀಲಿಂಬಿಯ ದೇವರಾಜ ಅರಸ್ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿನಿಯರಿಗೆ ಪ್ರತೀ ವರ್ಷವೂ ಪಶ್ಚಿಮ ಘಟ್ಟದ ಮಡಿಲಿಗೆ ಕರೆದುಕೊಂಡು ಹೋಗಿ ಪಶ್ಚಿಮಘಟ್ಟದ ಒಡಲನ್ನು ಪರಿಚಯಿಸುವ ಅಲ್ಲಿನ ಮಳೆಕಾಡು, ನದೀ ಮೂಲ, ಗಿರಿ ಕಣಿವೆಯ ಬಗ್ಗೆ ಮಾಹಿತಿ ನೀಡಿ ಸಂರಕ್ಷಣೆ ಆಗುವಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ನಿನ್ನೆ ಕೂಡಾ ಅದೇ ರೀತಿ ಬೆಟ್ಟದ ಮೇಲೆ ಮಾಡಿದ ಪಾಠ.