ಪುತ್ತೂರು: ಮಂಗಳೂರು ವಿವಿಯು ಕಳೆದ ಎಪ್ರಿಲ್/ ಮೇ ತಿಂಗಳಿನಲ್ಲಿ ನಡೆಸಿದ ಪದವಿ ಪರೀಕ್ಷೆಗಳಲ್ಲಿ ರ್ಯಾಂಕು ಗಳಿಸಿದ ಸಂತ ಫಿಲೋಮಿನಾ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳನ್ನು ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು.  

ಬಿಎಸ್ಸಿಯಲ್ಲಿ ಎಂಟನೆಯ ರ್ಯಾಂಕ್ ವಿಜೇತೆ ಮಧುರಾ ಪಿ ಕೆ, ಒಂಬತ್ತನೆಯ ರ್ಯಾಂಕು ವಿಜೇತೆ ಕ್ರಿಸ್ಟೆಲ್ ಲಿವಿಯಾ ಮಸ್ಕರೇನಸ್, ಬಿಬಿಎಯಲ್ಲಿ ಮೂರನೆಯ ರ್ಯಾಂಕು ವಿಜೇತೆ ರೋಶ್ನಿ ಎಮ್ ವೈ, ನಾಲ್ಕನೆಯ ರ್ಯಾಂಕು ವಿಜೇತೆ ಶಬಾನ,  ಬಿಸಿಎಯಲ್ಲಿ ಏಳನೆಯ ರ್ಯಾಂಕು ವಿಜೇತೆ ಶಿವಾನಿ ಎಮ್,  ಬಿಎಯಲ್ಲಿ ಎಂಟನೆಯ ರ್ಯಾಂಕು ವಿಜೇತೆ  ತಶ್ರೀಫಾ ಜಹಾನ್, ಎಂಕಾಮ್‍ನಲ್ಲಿ ಪ್ರಥಮ ರ್ಯಾಂಕು ವಿಜೇತೆ ನವ್ಯ ಭಟ್, ಹತ್ತನೆಯ ರ್ಯಾಂಕು ವಿಜೇತೆ ಅಪರ್ಣಾ ಜಿ ಮತ್ತು ಗಣಿತಶಾಸ್ತ್ರ ಎಮ್‍ಎಸ್ಸಿಯಲ್ಲಿ ಪ್ರಥಮ ರ್ಯಾಂಕು ವಿಜೇತೆ ಚೈತ್ರ ಬಿ ಜೆ ಇವರನ್ನು ಕಾಲೇಜಿನ ಸಂಚಾಲಕ ಅತಿ ವಂ. ಆಲ್ಫ್ರೆಡ್ ಜೆ ಪಿಂಟೊ, ಅಡ್ವಾನ್ಸ್‍ಡ್ ಟೆಕ್ನಿಕಲ್ ಸರ್ವಿಸಸ್ ಹಾಗೂ ಅಸೋಸಿಯೇಟೆಡ್ ಟೆಕ್ನಿಕಲ್ ಸರ್ವಿಸಸ್, ಕತಾರ್ ಇದರ ಮ್ಯಾನೇಜಿಂಗ್ ಡೈರೆಕ್ಟರ್  ಎಮ್ ರವಿ ಶೆಟ್ಟಿ, ಪ್ರಾಚಾರ್ಯ ಪ್ರೊ. ಲಿಯೊ ನೊರೊನ್ಹಾ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಹಾಗೂ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಣ್ಣ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ. ಜಗಜೀವನ್‍ದಾಸ್ ರೈ ಮೊದಲಾದವರು ಸನ್ಮಾನಗೈದರು.