ಪುತ್ತೂರು: ರಾಷ್ಟ್ರೀಯ ಸಾಮಾಜಿಕ ಸಾಂಸ್ಕøತಿಕ ಅಭಿವೃದ್ಧಿ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು ವಕೀಲರ ಸಂಘ(ರಿ) ಮತ್ತು ಸಂತ ಫಿಲೋಮಿನಾ ಕಾಲೇಜಿನ ಆಶ್ರಯದಲ್ಲಿ ಮಹಿಳಾ ದೌರ್ಜನ್ಯ, ಸಾಮಾಜಿಕ ಜಾಲತಾಣಗಳು ಮತ್ತು ಯುವಜನತೆ  ಕುರಿತು ಕಾನೂನು ಅರಿವು ಕಾರ್ಯಕ್ರಮ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಸೆಪ್ಟೆಂಬರ್ 21ರಂದು ಬೆಳಿಗ್ಗೆ ಘಂಟೆ 10ಕ್ಕೆ ಜರಗಲಿದೆ.

ಪುತ್ತೂರಿನ ಜಿಲ್ಲಾ  ಮತ್ತು ಸತ್ರ ನ್ಯಾಯಾಧೀಶ ರುಡೋಲ್ಫ್  ಪಿರೇರಾ  ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಅಧ್ಯಕ್ಷತೆ ವಹಿಸಲಿದ್ದಾರೆ.  ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಎಸಿಜೆಎಮ್ ಹಾಗೂ ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ  ಮುಂಜುನಾಥ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ ವಿ, ದಕ ಜಿಲ್ಲಾ  ಕಾನೂನು ಸೇವೆಗಳ  ಪ್ರಾಧಿಕಾರದ ಸದಸ್ಯ ಹಾಗೂ ವಕೀಲ ಎ ಉದಯಶಂಕರ ಶೆಟ್ಟಿ, ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕಿ ಪ್ರೇಮಲತಾ ಕೆ, ಕೆಎಸ್‍ಎಸ್‍ಎಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಮಹಿಳಾ ದೌರ್ಜನ್ಯ ಕುರಿತು ನ್ಯಾಯವಾದಿ ಮನೋಹರ್ ಕೆ ವಿ ಮತ್ತು ಸಾಮಾಜಿಕ ಜಾಲತಾಣಗಳು ಮತ್ತು ಯುವಜನತೆ  ಕುರಿತು ನ್ಯಾಯವಾದಿ ಅನೀಶ್ ಕೃಷ್ಣ  ಬೆಟ್ಟ ಉಪನ್ಯಾಸ ನೀಡಲಿರುವರು. ಎನ್‍ಎಸ್‍ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ ಮತ್ತು ಕಾರ್ಯದರ್ಶಿ ದಿನಕರ್ ಡಿ ಬಂಗೇರ ಕಾರ್ಯಕ್ರಮ ಸಂಯೋಜಿಸಲಿದ್ದು, ಮಲ್ಲಿಕಾ ಅಜಿತ್ ಶೆಟ್ಟಿ ನಿರೂಪಿಸಲಿದ್ದಾರೆ ಎಂದು ಕಾಲೇಜಿನ ಪಿಆರ್‍ಒ ಪ್ರಕಟನೆ ತಿಳಿಸಿದೆ.