ಬಂಟ್ವಾಳ:  ಪ್ರಾಮಾಣಿಕತೆಯ ವ್ಯಕ್ತಿತ್ವದಿಂದ ಕಷ್ಟದ ಜೀವನ ಸಾಗಿಸುವವರು ರಿಕ್ಷಾ ಚಾಲಕರು ಎಂದು ಬಂಟ್ವಾಳ ನಗರ ರೋಟರಿ ಟೌನ್‌ನ ಅಧ್ಯಕ್ಷ ಜಯರಾಜ್ ಎಸ್.ಬಂಗೇರ  ಹೇಳಿದರು. ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ನಡೆದ  ಬಿ ಎಂ ಎಸ್ ಸಂಯೋಜಿತ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಬಿ.ಸಿ.ರೋಡ್ ಶಾಖೆಯ 31 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ  ಅವರು ಮಾತನಾಡಿ,

ರಿಕ್ಷಾ ಮನುಷ್ಯನ ದೈನಂದಿನ ಜೀವನದಲ್ಲಿ  ಒಂದು ಭಾಗವಾಗಿ ಕೆಲಸ ಮಾಡುತ್ತಿದೆ ಎಂದು  ಹೇಳಿದರು.

ಬಿ.ಎಂ.ಎಸ್.ನ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,

ವೃತ್ತಿಯಲ್ಲಿ  ಯಾವುದೇ ಕೀಳರಿಮೆ ಬೇಡ , ವೃತ್ತಿಗೌರವ ಬೆಳೆಸಿಕೊಂಡು ಶಿಸ್ತು, ಸಂಯಮ, ನೀತಿ, ನಿಯಮಗಳನ್ನು ಪಾಲಿಸಿಕೊಂಡು ಮುನ್ನಡೆಯಬೇಕು ಎಂದು  ಹೇಳಿದರು.

ಸಾಮಾಜಿಕ ಚಟುವಟಿಕೆಯಲ್ಲಿ ರಿಕ್ಷಾ ಚಾಲಕರು ತೊಡಗಿಸುವುದರ ಜತೆಗೆ ಸಂಘಟನೆಯನ್ನು ಬಲಪಡಿಸಬೇಕು  ಎಂದು ಹೇಳಿದರು.

ಕಾನೂನು ಸಲಹೆಗಾರ, ನ್ಯಾಯವಾದಿ ಜಯರಾಮ ರೈ ಮಾತನಾಡಿ, ಸಂಘಟನೆಯಿಂದ, ಸಂಘಟಿತರಾದಾಗ  ಮತ್ತು ಕಾನೂನು ಪ್ರಕಾರ ಇದ್ದಾಗ ಮಾತ್ರ  ನಮಗೆ  ಮೌಲ್ಯ ಸಿಗುತ್ತದೆ ಎಂದರು.

ಒಡಿಯೂರು ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ದ ಅಧ್ಯಕ್ಷ ಎ.ಸುರೇಶ್ ರೈ  ರಿಕ್ಷಾ ಚಾಲಕರಿಗೆ ವಿಮೆ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ  ಬಿ.ಎಂ.ಎಸ್.ನ ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ, ಸದಾನಂದ ಗೌಡ ನಾವೂರ, ನೂತನ ಅಧ್ಯಕ್ಷ ಸತೀಶ್ ಭಂಡಾರಿ ಬೆಟ್ಟು,ಕಾರ್ಯದರ್ಶಿ ಕೃಷ್ಣ ಮಣಿಹಳ್ಳ ಉಪಸ್ಥಿತರಿದ್ದರು.

ಸಂಘದ  ಕಾರ್ಯದರ್ಶಿ ನಾರಾಯಣ ವರದಿ ವಾಚಿಸಿದರು.ಸಂಘದ ಸಲಹೆಗಾರ ಸದಾನಂದ ಗೌಡ ಸ್ವಾಗತಿಸಿ, ಸಂಘಧ ಆಧ್ಯಕ್ಷ ವಸಂತ ಕುಮಾರ್ ವಿ.ಮಣಿಹಳ್ಳ ವಂದಿಸಿದರು. ಉಮಾಶಂಕರ್ ಕಾರ್ಯಕ್ರಮ ನಿರೂಪಿಸಿದರು.