ಬಂಟ್ವಾಳ: ಬೆಂಗಳೂರಿನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಮಟ್ಟದ ವಿಜ್ಞಾನ ಮೇಳದಲ್ಲಿ ಬಂಟ್ವಾಳ ತಾಲೂಕಿನ ಒಂದೇ ಮನೆಯ ಸಹೋದರ ಮತ್ತು ಸಹೋದರಿ "ಐರಿಸ್ ರಾಷ್ಟ್ರೀಯ ವಿಜ್ಞಾನ ಮೇಳ"ದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದರು.   ಬಿ.ಸಿ.ರೋಡ್ ಸಮೀಪದ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ವರ್ಷಾ ಡಿ. ಗೌಡ ಮತ್ತು ಮಂಗಳೂರು ಶಾರದಾ ಪಿ. ಯು. ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ವೈಶಾಖ್ ಡಿ. ಗೌಡ  ಅವರು ಮಂಡಿಸಿದ 'ಇರಾಡಿಕೇಟ್ ಒಬೇಸಿಟಿ' ಪ್ರಬಂಧ ನಿರ್ಣಾಯಕರ ಪ್ರಶಂಸೆಗೆ ಪಾತ್ರವಾಗಿದೆ.   ಇವರು ಬಿ.ಸಿ.ರೋಡಿನ ಸಂಚಯಗಿರಿ ನಿವಾಸಿ, ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ  ಶರೀರಕ್ರಿಯಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ದಾಮೋದರ ಗೌಡ ಕೆ. ಎಂ. ಮತ್ತು ಕೊಯಿಲ ಸಕರ್ಾರಿ ಪ್ರೌಢಶಾಲೆ ಶಿಕ್ಷಕಿಯಾಗಿರುವ ನಿವೇದಿತಾ. ಕೆ.ಕೆ. ಇವರ ಪುತ್ರ ಮತ್ತು ಪುತ್ರಿ. ಇವರಿಗೆ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ವಿಜ್ಞಾನ ಶಿಕ್ಷಕ ಕಿಶೋರ್ ಸುವರ್ಣ ಮಾರ್ಗದರ್ಶನ ನೀಡುತ್ತಿದ್ದಾರೆ.