ಸ್ನೇಹ ಎಂಬುದು ವಿಶಾಲ ಸಾಗರ, ಇಲ್ಲಿ ಅನೇಕರು ಬಂದು ಹೋಗುತ್ತಾರೆ, ಕೆಲವರಷ್ಟೇ ಉಳಿಯುತ್ತಾರೆ. ಅದು ಸಾಗರದೊಳಗಿನ ಮುತ್ತಿನಂತೆ. ಅವರ ಮಾತು, ನೆನಪು ಎಂದೂ ಅಜರಾಮರ. ಅದೆಂದಿಗೂ ಹೊಳಪು ಕಳೆದುಕೊಳ್ಳದ ಸ್ನೇಹವಾಗಿ ರೂಪುಗೊಳ್ಳುತ್ತದೆ.

ವಯೋಸಹಜ ಅನ್ನುತ್ತಾರಲ್ಲ ಹಾಗೆ… ನಾನೂ ಕೆಲ ಗೆಳೆಯರ ಸಂಗಡ ಬೆರೆತಿದ್ದೆ. ಅವರೇನು ಮಾಡುತ್ತಿದ್ದಾರೆ ಎಂದು ನನಗೂ ಆಗ ತಿಳಿಯಲಿಲ್ಲ. ʼಪಾರ್ಟಿಗೆ ಬಾʼ ಅಂದರು. ಯಾವತ್ತೂ ಹೋಗದವನು ಅವರಿಗೆ ಬೇಸರವಾಗಬಾರದಲ್ಲ ಎಂದು ಹೋದೆ. ಅದ್ಯಾವುದೋ ಅಮಲು ಪದಾರ್ಥ ಮುಂದಿಟ್ಟು ʼಏನೂ ಆಗೋದಿಲ್ಲ ತೆಗೋʼ ಎಂದರು. ಇಕ್ಕಟ್ಟಿಗೆ ಸಿಲುಕಿದ್ದೆ. ಏನು ಮಾಡುವುದೆಂದು ತೋಚಲಿಲ್ಲ. ಆಗಲೇ ಸ್ನೇಹವೆಂಬ ಮಾಂತ್ರಿಕ ಶಕ್ತಿಯಿಂದ ನನ್ನ ಬದುಕು ಬದಲಿಸಿದ ಸ್ನೇಹಿತನ ಆಗಮನವಾಗಿತ್ತು.

ನನ್ನನ್ನು ಇಕ್ಕಟ್ಟಿನಿಂದ ಪಾರುಮಾಡಿದ ಆತ ನನ್ನ ಜೀವನ ಹೊಸ ತಿರುವು ಪಡೆಯುವಂತಾ ಬುದ್ಧಿಮಾತು ಹೇಳಿದ್ದ. “ಹೀಗಾದರೆ ನಿನ್ನ ತಂದೆ-ತಾಯಿಯ ಗತಿಯೇನು? ನಿನ್ನ ಉಜ್ವಲ ಭವಿಷ್ಯ ಕಥೆಯೇನು?” ಎಂದು ಕಣ್ಣು  ತೆರೆಸಿದ್ದ.  ಕೆಟ್ಟ ಚಟಕ್ಕೆ ದಾಸನಾದರೆ ಬದುಕು ಹಳಿತಪ್ಪಿದಂತೆ ಎಂದ ಅವನು ಹೇಳಿದ್ದ ಮಾತು ಇಂದಿಗೂ ನೆನಪಾಗುತ್ತದೆ. ಆ ಗೆಳೆಯ ಬಾಳಲ್ಲಿ ಪ್ರವೇಶವಾಗದಿದ್ದರೆ ನನ್ನ ಬದುಕಿಂದು ಬಂಗಾರವಾಗುತ್ತಿರಲಿಲ್ಲ. ಅವನಿಂದಾಗಿ, ಕುರುಡಾಗಿದ್ದ ನನ್ನ ಬಾಳಲ್ಲಿ ಹೊಸ ಆಶಾಕಿರಣ ಮೂಡಿತು. ಅವನೇ ಎಂದೆಂದಿಗೂ ನನ್ನ ನಿಜವಾದ ಗೆಳೆಯ…



ಗಿರೀಶ್‌ ಪಿ ಎಂ, ಪ್ರಥಮ ಬಿಎ

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು