ಮಂಗಳೂರು:- 2020-21ನೇ ಸಾಲಿನ ಸಮನ್ವಯ ಶಿಕ್ಷಣದ ಕಾರ್ಯತಂತ್ರದಡಿಯಲ್ಲಿ ಜಿಲ್ಲೆಯಲ್ಲಿ ಖಾಲಿ ಇರುವ ಬಿ.ಐ.ಇ.ಆರ್.ಟಿ. ಪ್ರೌಢ ಹುದ್ದೆ (ಬಂಟ್ವಾಳ – 2, ಬೆಳ್ತಂಗಡಿ – 1, ಮೂಡಬಿದ್ರೆ – 1, ಪುತ್ತೂರು – 2 ಮತ್ತು ಸುಳ್ಯ -2)ಗೆ ವಿಶೇಷ ಬಿ.ಇಡಿ (Special B.Ed) ಮತ್ತು ಎಮ್‍ಸಿಟಿಟಿ (Multi Category Teachers Training) ವಿದ್ಯಾರ್ಹತೆ ಪ್ರಮಾಣ ಪತ್ರ ಹೊಂದಿರುವ ಅರ್ಹ ವಿಶೇಷ ಶಿಕ್ಷಕರನ್ನು (ವಿಕಲಚೇತನ ಮಕ್ಕಳಿಗೆ ಬೋಧಿಸುವ ಶಿಕ್ಷಕರು) ನೇರ ಗುತ್ತಿಗೆ ಮೂಲಕ ನೇಮಿಸಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು ಅಗತ್ಯ ದಾಖಲೆಯೊಂದಿಗೆ (ಆರ್.ಸಿ.ಐ) ಸಮಗ್ರ ಶಿಕ್ಷಣ ಕರ್ನಾಟಕ, ದ.ಕ. ಜಿಲ್ಲಾ ಪಂಚಾಯತ್ ಕಟ್ಟಡ, ಕೊಟ್ಟಾರ, ಮಂಗಳೂರು, ಜಿಲ್ಲಾ ಕಚೇರಿಗೆ ಜೂನ್ 10 ರಂದು ಮಧ್ಯಾಹ್ನ 1.30 ಗಂಟೆಯ ಒಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2452100 ಸಂಪರ್ಕಿಸಲು ಸಮಗ್ರ ಶಿಕ್ಷಣ ಕರ್ನಾಟಕ ಜಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಪ್ರಕಟಣೆ ತಿಳಿಸಿದೆ.