ಮಂಗಳೂರು, ಜೂ.4: ಕೊರೋನಾ ಲಾಕ್ ಡೌನ್ ವಿಚಾರದಲ್ಲಿ ಜನ ಸಾಮಾನ್ಯರ ಬದುಕು ತತ್ತರಿಸಿರುವಾಗ ಮಂಗಳೂರು ಮಹಾನಗರ ಪಾಲಿಕೆ ಜೂನ್ 5 ರಂದು ಬೀದಿ ಬದಿ ವ್ಯಾಪಾರಸ್ಥರನ್ನು ಬಲವಂತದಿಂದ ತೆರವು ಗೊಳಿಸುವ ಟೈಗರ್ ಕಾರ್ಯಾಚರಣೆ ನಡೆಸಲು ಮುಂದಾಗಿರುವುದು ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ದಕ ಜಿಲ್ಲಾ ಸಮಿತಿ ಖಂಡಿಸುತ್ತದೆ,
ಹೊಟ್ಟೆ ಪಾಡಿಗಾಗಿ ವ್ಯಾಪಾರ ನಡೆಸಿ ಬದುಕು ಸಾಗಿಸುವ ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆ ಬದಲಿ ವ್ಯವಸ್ಥೆಯನ್ನು ಮಾಡದೆ ಅವರ ಮೇಲೆ ಬಲವಂತದಿಂದ ಬಲ ಪ್ರಯೋಗ ನಡೆಸಿ ದಮನಿಸಲು ಹೊರಟಿರುವ ಪಾಲಿಕೆಯ ನಿರ್ಧಾರ ಖಂಡಿತವಾಗಿ ಒಪ್ಪುವಂತದ್ದಲ್ಲ.
ವ್ಯಾಪಾರಸ್ಥರಿಗೆ ಶಾಶ್ವತ ಪರಿಹಾರ ಒದಗಿಸಿ ಅವರಿಗೆ ಬದುಕು ಸ್ವಾಭಿಮಾನದಿಂದ ಬದುಕು ಸಾಗಿಸಲು ಪಾಲಿಕೆ ಅವಕಾಶ ಮಾಡಿಕೊಡಬೇಕೆಂದು ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ದಕ ಜಿಲ್ಲಾ ಉಪಾಧ್ಯಕ್ಷ ಸುಲೈಮಾನ್ ಉಸ್ತಾದ್ ಪ್ರಕಟಣೆಯಲ್ಲಿ ಆಗ್ರಹ ಪಡಿಸಿದ್ದಾರೆ.