ಬೆಂಗಳೂರು:- ಲಾಕ್ ಡೌನ್ ಬೇಕಾ ಬೇಡವೋ ಎಂದು ತೀರ್ಮಾನ ಮಾಡೋಕೆ ತಜ್ಞರ ಸಮಿತಿ ಇದೆ..ಅವರು ಸಲಹೆ ಸೂಚನೆ ಕೊಡ್ತಾರೆ. ಕೋವಿಡ್ ಟೆಸ್ಟ್ ಹೆಚ್ಚಾಗಬೇಕು ಎನ್ನುವ ಅಭಿಪ್ರಾಯ ಬಂದಿದೆ. ಕಾರ್ಮಿಕರು, ವ್ಯಾಪಾರಿಗಳು, ಹೀಗೆ 15 ಕೆಟೆಗೆರಿ ಮಾಡಿ ಟೆಸ್ಟ್ ಗಳು ಆಗಬೇಕು. ಇದರಿಂದ ಸೋಂಕು ಸಮುದಾಯಕ್ಕೆ ಹರಡಿದಿಯ ಇಲ್ವಾ ಅನ್ನೋದು ಗೊತ್ತಾಗುತ್ತದೆ ಸೋಮವಾರ ಟಾಸ್ಕ್ ಪೋರ್ಸ್ ಮೀಟಿಂಗ್ ಇದೆ.ಟಾಸ್ಕ್ ಪೋರ್ಸ್ ಸಭೆಯಲ್ಲಿ ಎಲ್ಲಾ ಚರ್ಚೆ ಮಾಡಿ ಸಿಎಂ ಗಮನಕ್ಕೆ ತರುತ್ತೇವೆ ಎಂಬುದಾಗಿ ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಬಿ ಶ್ರೀರಾಮುಲು, ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಬೇಕಾ.. ಬೇಡವೇ ಎನ್ನುವ ಬಗ್ಗೆ ನಾವು ತೀರ್ಮಾನಿಸುವುದಲ್ಲ. ಅದಕ್ಕಾಗಿ ತಜ್ಞರ ಸಮಿತಿ ಇದೆ. ಆ ಸಮಿತಿಯ ನಿರ್ದೇಶನ, ತೀರ್ಮಾನದಂತೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಾಗಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದರು.
ಇನ್ನೂ ಮುಂದುವರೆದು ಮಾತನಾಡಿದ ಅವರು, ನಾಳೆ SSLC ಪರೀಕ್ಷೆ ನಡೆಯುತ್ತದೆ. ಸುಮಾರು 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸೋಶಿಯಲ್ ಡಿಸ್ಟೆನ್ಸ್, ಮಾಸ್ಕ್ ಅಗತ್ಯ. ಮಕ್ಕಳು ಪೋಷಕರು ಭಯಪಡಬೇಕಿಲ್ಲ. ನಾನು ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗಾಗಲೇ ಸಾಕಷ್ಟು ಸಭೆ ಮಾಡಿದ್ದೇವೆ.ಮಕ್ಕಳ ಸುರಕ್ಷತೆಗೆ ಗಮನ ಕೊಟ್ಟಿದ್ದೇವೆ. ಕಂಟೋನ್ಮೆಂಟ್ ಝೋನ್ ಇಂದ ಬರುವ ವಿದ್ಯಾರ್ಥಿಗಳಿಗೆ ಹೆಚ್ಚು ಜಾಗ್ರತೆ ವಹಿಸುತ್ತೇವೆ ಎಂಬುದಾಗಿ ಸ್ಪಷ್ಟ ಪಡಿಸಿದರು.