ಮಂಗಳೂರು: ಕೊಂಕಣಿ ಕಮ್ಯೂನಿಟಿ ಬಹ್ರೈನ್ ಅವರು ಸಾದರ ಪಡಿಸಿದ 15 ಕೊಂಕಣಿ ಗೀತೆಗಳನ್ನೊಳಗೊಂಡ ಪ್ರಶ್ಶರ್ ಕುಕ್ಕರ್ ಸಾಸು ಮಾಯ್ ಸಿಡಿಯನ್ನು ಸಂತ ತೆರೆಜಾ ಚರ್ಚಿನಲ್ಲಿ ಚರ್ಚಿನ ಧರ್ಮಗುರುಗಳಾದ ವಂ| ಆಲ್ಬನ್ ಮೆನೆಜಸ್ ಹಾಗೂ ಚಾಲ್ರ್ಸ್ ಡಿ'ಮೆಲ್ಲೊ ಅವರು ಜಂಟಿಯಾಗಿ ಬಿಡುಗಡೆ ಗೊಳಿಸಿದರು. ಬಹ್ರೈನ್ ಕೊಂಕಣಿ ಸಂಗೀತಗಾರರು ಹಾಗೂ ಲೇಖಕರಿಂದ ತಯಾರಿಸಲ್ಪಟ್ಟ ಈ ಸಿಡಿಯಲ್ಲಿ ಮಂಗಳೂರಿನ ಹಾಗೂ ಅಸುಪಾಸಿನ ಗಾಯಕರು ತಮ್ಮ ಸ್ವರವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ವಂ| ಡೆರಿಲ್ ಫೆರ್ನಾಂಡಿಸ್, ವಂ| ಪಾವ್ಲ್ ಕ್ರಾಸ್ತಾ, ವಂ| ಡೆನ್ನಿಸ್ ಮೊರಾಸ್ ಪ್ರಭು, ವಂ| ವಿ.ವಿ. ಮೆನೆಜಸ್, ಸಿ| ಸುವರ್ಣ, ಚಾಲ್ರ್ಸ್ ಫೆರ್ನಾಂಡಿಸ್ ರೋಶನ್ ಕ್ರಾಸ್ತಾ, ವೀಣಾ ಕ್ರಾಸ್ತಾ, ಇ. ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.