ಮಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರುಗಳು ಆಗಸ್ಟ್ 31ರಂದು ದ.ಕ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಲಿದ್ದಾರೆ. ಧರ್ಮಸ್ಥಳಕ್ಕೆ ಭೇಟಿ ನೀಡಲಿರುವ ಅವರು ಪಚ್ಚನಾಡಿಗೆ ತೆರಳಲಿದ್ದು, ನಂತರ ಅಪರಾಹ್ನ 3.00 ಗಂಟೆಗೆ ಪುರಭವನದಲ್ಲಿ ಆಯೋಜಿಸಲಾಗಿರುವ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಸಂತ್ರಸ್ತರಿಗೆ ಇನ್ನಷ್ಟು ನೆರವಾಗುವಂತೆ ಪ್ರೇರಣೆ ನೀಡಲಿದ್ದಾರೆ. ಸದ್ರಿ ಸಮಾವೇಶಕ್ಕೆ ಸರ್ವ ಸಿದ್ಧತೆ  ನಡೆಸಲಾಗುತ್ತಿದ್ದು ಸಾವಿರಾರು ಕಾರ್ಯಕರ್ತರು ಭಾಗವಹಿಸುವರು ಎಂಬ ನಿರೀಕ್ಷೆ ಇದೆ ಎಂದು ದ.ಕ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದರು.

ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾಹಿತಿ ನೀಡಿದರು. ಪಕ್ಷದ ಶಾಸಕರು, ಮಾಜಿ ಶಾಸಕರುಗಳು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರುಗಳು, ಮುಂಚೂಣಿ ಫಟಕಗಳ ಸದಸ್ಯರು, ನಗರಸಭೆ, ಪುರಸಭೆ, ಮ.ನ.ಪಾ. ಸದಸ್ಯರುಗಳು, ಜಿಲ್ಲಾ ಕಾಂಗ್ರೆಸ್ ಸದಸ್ಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಲಾಗಿದೆ ಎಂದರು.

ಇಂದಿನ ಈ ಸಿದ್ಧತಾ ಸಭೆಯಲ್ಲಿ ಮಾಜಿ ಸಚಿವ ರಮಾನಾಥ ರೈ, ಶಾಸಕ ಯು.ಟಿ ಖಾದರ್, ವಿಧಾನಪರಿಷತ್ತು ಸದಸ್ಯ ಐವನ್ ಡಿ’ಸೋಜಾ, ಮಾಜಿ ಶಾಸಕ ಅಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ವೇದಿಕೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಮಿಥುನ್ ರೈ, ಧನಂಜಯ ಅಡ್ಪಂಗಾಯ, ಶಶಿಧರ್ ಹೆಗ್ಡೆ, ಶಾಲೆಟ್ ಪಿಂಟೋ, ಅಶ್ರಫ್ ಸೇವಾದಳ, ಪಿ.ವಿ ಮೋಹನ್, ಎಂ.ಎಸ್ ಮಹಮ್ಮದ್, ಮಮತಾ ಗಟ್ಟಿ, ನವೀನ್ ಆರ್ ಡಿ’ಸೋಜಾ, ಕವಿತಾ ಸನಿಲ್, ಬಿ.ಎಂ ಭಾರತಿ, ಹಾಜಿ ಟಿ.ಎಸ್ ಅಬ್ದುಲ್ಲಾ, ಹೇಮನಾಥ್ ಶೆಟ್ಟಿ, ಮಹಮ್ಮದ್ ಮಲಾರ್ ಮೋನು, ಚಂದ್ರಹಾಸ್ ಕರ್ಕೇರಾ, ಗಣೇಶ್ ಪೂಜಾರಿ, ಬ್ಲಾಕ್ ಅಧ್ಯಕ್ಷರುಗಳಾದ ಮಹಮ್ಮದ್ ಬಡಗನ್ನೂರು, ಮುರಳೀಧರ್ ರೈ, ಜಯಪ್ರಕಾಶ್ ರೈ, ಧನಂಜಯ ಮಟ್ಟು, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಸುರೇಂದ್ರ ಬಿ.ಕಂಬಳಿ, ಬೇಬಿ ಕುಂದರ್, ವಲೇರಿಯನ್ ಸಿಕ್ವೇರಾ, ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಧಾನಪರಿಷತ್ತು ಸದಸ್ಯ ಐವನ್ ಡಿ’ಸೋಜಾರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಫಲಾನುಭವಿಯೋರ್ವರಿಗೆ ರೂ. 25,000/-ದ ಚೆಕ್ ಹಸ್ತಾಂತರಿಸಲಾಯಿತು. ಕೆ.ಕೆ ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು. ಪ್ರ.ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಕಛೇರಿ ಕಾರ್ಯದರ್ಶಿ ನಝೀರ್ ಬಜಾಲ್, ವಕ್ತಾರ ಖಾಲಿದ್ ಉಜಿರೆ ಸಹಕರಿಸಿದ್ದರು. ಬ್ಲಾಕ್ ಅಧ್ಯಕ್ಷರುಗಳು, ಮ.ನ.ಪಾ ಸದಸ್ಯರು, ಮುಂಚೂಣಿ ಘಟಕಗಳ ಸದಸ್ಯರು ಸಲಹಾ ಸೂಚನೆ ಇತ್ತರು. ಕಾಂಗ್ರೆಸ್ ಮುಖಂಡರುಗಳು ಸಭೆಯಲ್ಲಿ ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಂಡರು.