ಮಂಗಳೂರು (ಸೆಪ್ಟೆಂಬರ್ 19):- ಸರ್ಕಾರಿ ಐ.ಟಿ.ಐ ಮಹಿಳಾ, ಕದ್ರಿಹಿಲ್ಸ್, ಮಂಗಳೂರು-575008 ಈ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದ ಪಿಪಿಪಿ ತರಬೇತಿ ಯೋಜನೆಯಡಿಯಲ್ಲಿ ಅನುಷ್ಠಾನಗೊಂಡು ಎನ್.ಸಿ.ವಿ.ಟಿ ಸಂಯೋಜನೆ ಪಡೆದ ಈ ಕೆಳಕಂಡ ವೃತ್ತಿಗಳ ಮ್ಯಾನೇಜ್ಮೆಂಟ್ ಸೀಟ್ಗಳು ಖಾಲಿ ಇದ್ದು, ಈ ಖಾಲಿ ಸ್ಥಾನಗಳನ್ನು ಭರ್ತಿಗೊಳಿಸಲಿರುವುದರಿಂದ ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸದೆ ಇರುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ನೇರವಾಗಿ ಸಂಸ್ಥೆಗೆ ಹಾಜರಾಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆದುಕೊಳ್ಳಬಹುದು.
ಸರ್ಕಾರಿ ಐ.ಟಿ.ಐ ಮಹಿಳಾ, ಕದ್ರಿ ಹಿಲ್ಸ್ ಮಂಗಳೂರು ಇಲ್ಲಿ ಐ.ಎಂ.ಸಿ ಮ್ಯಾನೇಜ್ಮೆಂಟ್ ಸೀಟ್ ಖೋಟಾದಡಿಯಲ್ಲಿ ಲಭ್ಯವಿರುವ ವೃತ್ತಿಗಳ ವಿವರ ಇಂತಿವೆ:-
ವೃತ್ತಿಯ ಹೆಸರು - ಸಿ.ಒ.ಪಿ.ಎ (ಕಂಪ್ಯೂಟರ್ ಅಪರೇಟರ್ ಆಂಡ್ ಪ್ರೋಗ್ರಾಂಮಿಂಗ್ ಅಸಿಸ್ಟೆಂಟ್, ತರಬೇತಿ ಅವಧಿ -1 ವರ್ಷ, ವಿದ್ಯಾರ್ಹತೆ – ಎಸ್.ಎಸ್.ಎಲ್.ಸಿ, ಮ್ಯಾನೇಜ್ಮೆಂಟ್ ಸೀಟ್- 8, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ತರಬೇತಿ ಅವಧಿ - 2 ವರ್ಷ, ವಿದ್ಯಾರ್ಹತೆ - ಎಸ್.ಎಸ್.ಎಲ್.ಸಿ, ಮ್ಯಾನೇಜ್ಮೆಂಟ್ ಸೀಟ್ – 8, ಎಲೆಕ್ಟ್ರಿಷಿಯನ್, ತರಬೇತಿ ಅವಧಿ - 2 ವರ್ಷ, ವಿದ್ಯಾರ್ಹತೆ - ಎಸ್.ಎಸ್.ಎಲ್.ಸಿ, ಮ್ಯಾನೇಜ್ಮೆಂಟ್ ಸೀಟ್ – 20, ಎಂ.ಆರ್.ಎ.ಸಿ, ತರಬೇತಿ ಅವಧಿ – 2 ವರ್ಷ, ವಿದ್ಯಾರ್ಹತೆ - ಎಸ್.ಎಸ್.ಎಲ್.ಸಿ, ಮ್ಯಾನೇಜ್ಮೆಂಟ್ ಸೀಟ್ – 24.
ಹೆಚ್ಚಿನ ಮಾಹಿತಿಗೆ ಸರ್ಕಾರಿ ಐ.ಟಿ.ಐ ಮಹಿಳಾ, ಕದ್ರಿಹಿಲ್ಸ್, ಕೊಂಚಾಡಿ ಮಂಗಳೂರು-575008 ಹಾಗೂ ದೂರವಾಣಿ ಸಂಖ್ಯೆ: 0824-2216360, 9845226485 ಸಂಪರ್ಕಿಸಲು ಪ್ರಾಚಾರ್ಯರ ಪ್ರಕಟಣೆ ತಿಳಿಸಿದೆ.