ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ರಂಗೇರುತ್ತಿದ್ದು ಕರ್ನಾಟಕ ರಾಷ್ಟ್ರ ಸಮಿತಿ ಈ ಚುನಾವಣೆಯಲ್ಲಿ ಖಾತೆ ತೆರೆಯಬೇಕೆಂದು ಪಣ ತೊಟ್ಟಿದ್ದು ಬೆಂಗಳೂರುನಿಂದ ಹೊರಟ ಕಾರ್ಯಕರ್ತರು ಮನೆ ಮನೆ ಬೇಟಿಯಲ್ಲಿ ತೊಡಗಿಕೊಂಡಿದ್ದಾರೆ. ಹಳದಿ ಟೀ ಶರ್ಟ್ ಹಾಗೂ ಗಾಂಧಿ ಟೋಪಿ ಧರಿಸಿ ಮನೆ ಮನೆಗೆ ಭೇಟಿ ಕೊಟ್ಟು ಪಕ್ಷದ ಸಿದ್ದಾಂತ ಹಾಗೂ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ.
ಅವಿನಾಶ್ ವಾರ್ಡ್ ನಂ. 22 ಕದ್ರಿ ಪದವು, ಹ್ಯಾರಿ ವಾರ್ಡ್ ನಂ. 24 ದೇರೆಬೈಲ್, ಮೇವಿಸ್ ರೊಡ್ರಿಗಸ್ ವಾರ್ಡ್ ನಂ. 33 ಕದ್ರಿ ದಕ್ಷಿಣ ಕ್ಷೇತ್ರದಲ್ಲಿ ಚುನಾವಣಾ ಟಿಕೆಟ್ ಪಡೆದಿದ್ದಾರೆ. ಮೂವರು ಅಭ್ಯರ್ಥಿ ಗಳು ಸಮಾಜ ಸೇವೆ ಹಾಗೂ ವಿದ್ಯಾವಂತ ರಾಗಿದ್ದು ಸಮಾಜದ ಸೇವೆ ಮಾಡುವ ಹಂಬಲ ಹೊಂದಿದ್ದಾರೆ.
24 ವಾರ್ಡ್ ದೇರೆಬೈಲ್ ನಿಂದ ಸ್ಪರ್ಧಿಸ ಬಯಸಿರುವ ಹ್ಯಾರಿ ಯವರು ಕೊಂಕಣಿ ಹಾಗೂ ಕನ್ನಡ ಚಿತ್ರಗಳಲ್ಲಿ ಖಳ ಹಾಗೂ ಪೊಷಕ ನಟನಾಗಿ ಅಭಿನಯಿಸಿದ್ದಾರೆ. ವಾರ್ಡಿನ ಸಮಸ್ಯೆ ಗಳಿಗೆ ಸೂಕ್ತ ಪರಿಹಾರ ನೀಡುವ ಉದ್ದೇಶದಿಂದ ಸ್ವತಃ ತಾನೇ ವಾರ್ಡಿ ನಾದ್ಯಂತ ಸಂಚರಿಸಿ ಮತ ನೀಡಬೇಕೆಂದು ಕೇಳಿಕೊಳ್ಳುತ್ತಿದ್ದಾರೆ.
ವಾರ್ಡ್ 33 ಕದ್ರಿ ದಕ್ಷಿಣ ದಿಂದ ಕಣಕ್ಕಿ ಳಿದಿರುವ ಮೇವಿಸ್ ರೊಡ್ರಿಗಸ್ ರವರು ವಿದ್ಯಾವಂತರಾಗಿದ್ದು ಹಲವಾರು ಸಮಾಜಮುಖಿ ಕೆಲಸ ಕಾರ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ವಾರ್ಡ್ ನ ಸುತ್ತಮುತ್ತಲಿನ ಅರಿವು ಅವರಲ್ಲಿ ಇರುವುದರಿಂದ ಸಮಸ್ಯೆ ಗೆ ಶೀಘ್ರ ಸ್ಪಂದಿಸುವ ಮನೋಭಾವ ಇವರಾದಾಗಿದೆ.