ಮಂಗಳೂರು,(ಮಾರ್ಚ್ 19):- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ  ಮಂಗಳೂರಿನಿಂದ  ಕಾರವಾರ ಮಾರ್ಗದಲ್ಲಿ ವೋಲ್ವೋ ವಾಹನವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ  ಮಾರ್ಚ್ 18 ರಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸಾರಿಗೆಯು ಮಂಗಳೂರು ಸ್ಟೇಟ್‍ಬ್ಯಾಂಕ್ ನಿಂದ ಮಧ್ಯಾಹ್ನ 4.15  ಗಂಟೆಗೆ ಹೊರಟು ಉಡುಪಿ, ಕುಂದಾಪುರ, ಭಟ್ಕಳ, ಹೊನ್ನಾವರ, ಕುಮಟ, ಅಂಕೋಲ ಮಾರ್ಗವಾಗಿ ರಾತ್ರಿ 9.15 ಕ್ಕೆ ಕಾರವಾರ ತಲುಪಲಿದೆ. ಕಾರವಾರದಿಂದ ಮುಂಜಾನೆ 6.45 ಕ್ಕೆ ಹೊರಟು ವಾಪಾಸು ಅದೇ ಮಾರ್ಗವಾಗಿ ಮದ್ಯಾಹ್ನ 11.45 ಗಂಟೆಗೆ  ಮಂಗಳೂರು ತಲುಪಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.