ಮಂಗಳೂರು:  ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅರ್ಹ ಗುತ್ತಿಗೆದಾರರಿಂದ ಟೆಂಡರ್ ಆಹ್ವಾನಿಸಲಾಗಿದೆ.

ಟೆಂಡರ್ ಫಾರ್ಮ್ ಪಡೆಯಲು ಕೊನೆಯ ದಿನ ಫೆಬ್ರವರಿ 10  ರಂದು ಸಂಜೆ 5 ಗಂಟೆ. ಭರ್ತಿ ಮಾಡಿದ ಟೆಂಡರನ್ನು ಸ್ವೀಕರಿಸುವ ಕೊನೆಯ ದಿನ ಫೆಬ್ರವರಿ 15 ರಂದು ಸಂಜೆ 5 ಗಂಟೆ. ಫೆಬ್ರವರಿ 19 ರಂದು ಬೆಳಿಗ್ಗೆ 11 ಗಂಟೆಗೆ ಕುಪ್ಪೆಪದವು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗುತ್ತಿಗೆದಾರರ ಸಮ್ಮುಖದಲ್ಲಿ ಟೆಂಡರ್ ತೆರೆಯಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಪ್ಪೆಪದವು  ತಿಳಿಸಿದೆ.