ಮಂಗಳೂರು:- ಕೋವಿಡ್ ನಿಗ್ರಹಣೆ ಯಲ್ಲಿ ರಾಜ್ಯ ಸರಕಾರ ಪೂರ್ಣ ವಾಗಿ ವಿಫಲವಾಗಿದ್ದು ಇದರ ಪ್ರತಿಭಟನೆಯು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು 10.30 am ಕ್ಕೆ ಜಿಲ್ಲಾ  ವೆಲ್ ನಾಕ್  ಆಸ್ಪತ್ರೆ ಎದುರು ನಡೆಯಿತು . ಈ ಸಂದರ್ಭದಲ್ಲಿ ಎಲ್ಲ ಕಾಂಗ್ರೆಸ್ ನಾಯಕರು, ಮಾಜಿ ಹಾಜಿ  ಕಾಂಗ್ರೆಸ್  ಎಂ ಲ್ ಎ ಗಳು ಹಾಗು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು . ಅದಲ್ಲದೆ ಮುಖಂಡರು ಮಾತನಾಡಿ ಜಿಲ್ಲಾಡಳಿತವು ವೆಲ್ ನೊಕ್  ಆಸ್ಪತ್ರೆ ಯಲ್ಲಿ ಸರಿಯಾದ ಚಿಕಿತ್ಸೆ ನೀಡದೆ ಪ್ರೈವೇಟ್ ಆಸ್ಪತ್ರೆಗೆ ಕಳುಹಿಸುತ್ತಾರೆ ಇದು ಬಡ ಜನರಿಗೆ ಸಾಧ್ಯವೇ ,ಮತ್ತು ಕೋವಿಡ್ 19 ಗೆ ಬಲಿಯಾಗಿ ಮೃತ  ಹೊಂದಿದವರ ಅಂತಿಮ ಸಂಸ್ಕಾರ  ನಡೆಸಲು ಸರಿಯಾದ ವ್ಯವಸ್ಥೆ ನಡೆಸದೆ ಇದ್ದರಿಂದ ಸಾರ್ವಜನಿಯರಿಗೆ ಗೊಂದಲ ಉಂಟುಮಾಡಿದೆ . ಈ ವಿಚಾರದಲ್ಲಿ ಸರಕಾರವು  ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದರು.