ಮಂಗಳೂರು:   ವಕ್ಫ್ ಮಂಡಳಿಯಲ್ಲಿ ನೊಂದಾವಣೆಯಾದ ಮತ್ತು ನೊಂದಾವಣೆಯಾಗದ ಎಲ್ಲಾ ಜಮಾತಿಗೊಳಪಟ್ಟು ವಾಸಿಸುತ್ತಿರುವ ಮುಸ್ಲಿಮರ ಎಲ್ಲಾ ದಾಖಲಾತಿಗಳನ್ನು ನಿರ್ವಹಿಸುವ ಒಂದು ದಾಖಲಾತಿ (ರಿಜಿಸ್ತ್ರಿ) ಪುಸ್ತಕವನ್ನು ಪ್ರತಿ ಜಮಾಅತಿನಲ್ಲಿಟ್ಟು ಎಲ್ಲಾ ಮುಸ್ಲಿಂ ಮನೆಯವರ ಜನ ಸಂಖ್ಯೆ ವಿವರಗಳನ್ನು ಆ ಪುಸ್ತಕದಲ್ಲಿ ಒದಗಿಸಬೇಕಾಗಿದೆ. ಇದು ಮುಂದಿನ ದಿನಗಳಲ್ಲಿ ಸರಕಾರ ಮಾಡುವ ಅಂಕಿ ಅಂಶಗಳಿಗೆ ನೆರವಾಗಲಿದೆ.

ರಾಷ್ತ್ರೀಯ ಪೌರತ್ವ ಕಾಯಿದೆ 1951ರ ಪ್ರಕಾರ(National Population Register) ರಾಷ್ತ್ರೀಯ ಜನ ಸಂಖ್ಯೆ ರಿಜಿಸ್ತ್ರಿ ನಿರ್ವಹಿಸುವುದು ಮತ್ತು ಮುಸ್ಲಿಮರ ಮನೆಗಳ ವಿವರಗಳನ್ನು ದಾಖಲಿಸುವ ಸಮಯದಲ್ಲಿ ಎಲ್ಲಾ ಮುಸ್ಲಿಂ ಜನ ಸಂಖ್ಯೆಯ ವಿವರಗಳು ಲಭ್ಯವಿಲ್ಲದೆ ಇರುವುದರಿಂದ ಚುನಾವಣೆ ಸಂದರ್ಭದಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ದಾಖಲಾಗಿರುವುದಿಲ್ಲ. ಮೂಲ ದಾಖಲೆಗಳು ಇಲ್ಲದೆ ಇರುವುದರಿಂದ ಪಡಿತರ ಚೀಟಿ, ಆಧಾರ್ ಕಾರ್ಡ್ ಇನ್ನಿತರ ದಾಖಲಾತಿಗಳು ಇರುವಿಕೆ ಬಗ್ಗೆ ದೃಢಪಡಿಸಲು ಸಾಧ್ಯವಾಗುವುದಿಲ್ಲ ಪ್ರಕೃತಿ ವಿಕೋಪ ಮತ್ತು ಇನ್ನಿತರ ಕಾರಣಗಳಿಂದ ಮೂಲ ದಾಖಲಾತಿಗಳು ಕಾಣೆಯಾಗಿದ್ದು ಪ್ರತಿಯೊಬ್ಬರು ತಮ್ಮ ಮೂಲ ದಾಖಲಾತಿಗಳನ್ನು ಸೂಕ್ಷ್ಮವಾಗಿ ಕಾಪಾಡಿಕೊಂಡು ಬರಬೇಕು.

ಈ ಹಿನ್ನೆಲೆಯಲ್ಲಿ ಮುಸ್ಲಿಂ ಭಾಂದವರು ತಮ್ಮ ದಾಖಲಾತಿಗಳನ್ನು ವ್ಯಕ್ತಿತ್ವ ಮತ್ತು ಸಾಮೂಹಿಕವಾಗಿ ಮಸೀದಿಯಲ್ಲಿ ನಿರ್ವಹಿಸುವ ದಾಖಲಾತಿ ರಿಜಿಸ್ತ್ರಿಯಲ್ಲಿ ಬರೆದಿಡಬೇಕೆಂದು ಹಾಗೂ ಎಲ್ಲಾ ಜಮಾಅತಿನ ಆಡಳಿತ ಕಮಿಟಿಯವರು ಈ ಬಗ್ಗೆ ಸೂಕ್ತ ಮಾಹಿತಿಗಳನ್ನು ಪ್ರತಿ ಜಮಾಅತಿನ ಮನೆಯವರಿಗೆ ವಿವರಿಸಿ ಕೊಡಬೇಕೆಂದು ದ.ಕ. ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.