ಮಂಗಳೂರು:-ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಕೈಗಾರಿಕಾ ಘಟಕಗಳ ನೋಂದಣಿ ಬಗ್ಗೆ ಸೆಪ್ಟೆಂಬರ್ 2015 ರಿಂದ ಉದ್ಯೋಗ್ ಆಧಾರ್ ಚಾಲ್ತಿಯಲ್ಲಿದ್ದು, ಆನ್‍ಲೈನ್‍ನಲ್ಲಿ  https://udyogaadhaar.gov.in  ಲಿಂಕ್‍ನ್ನು ಬಳಸಿ ‘ಉದ್ಯೋಗ್ ಆಧಾರ್ʼ ನ್ನು ಪಡೆಯಬಹುದು.

       ಈ ನೊಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. ಉತ್ಪಾದನೆ ಪ್ರಾರಂಭಿಸಿದ ನಂತರ ಎಲ್ಲಾ ಕೈಗಾರಿಕಾ ಘಟಕಗಳು ಆನ್‍ಲೈನ್ ನಲ್ಲಿ ನೊಂದಣಿ ಮಾಡಬಹುದು.

     ಅಲ್ಲದೇ ಸೆಪ್ಟೆಂಬರ್ 2015ಕ್ಕಿಂತ ಹಿಂದೆ SSI Registration Certificate  ಅಥವಾ ಇಒ-II ನೋಂದಣಿ ಪಡೆದವರು ಸಹಾ ‘ಉದ್ಯೋಗ ಆಧಾರ್ʼ ಪಡೆಯಬಹುದು.

     ಆನ್‍ಲೈನ್ ನಲ್ಲಿ ನೋಂದಣಿ ಮಾಡುವಾಗ ಉದ್ದಿಮೆದಾರರು ಸರಿಯಾದ ಲಿಂಕ್‍ನ್ನು ಉಪಯೋಗಿಸಬೇಕು. ಕೆಲವೊಂದು ನಕಲಿ ವೆಬ್‍ಸೈಟ್‍ಗಳು ಈ ಬಗ್ಗೆ ಶುಲ್ಕ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ.  ಆದ್ದರಿಂದ ಉದ್ದಿಮೆದಾರರು ಈ ಬಗ್ಗೆ ಜಾಗೃತರಾಗಿರಬೇಕು ಎಂದು ಮಂಗಳೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.