ಮಂಗಳೂರು :- ಮಂಗಳೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ಜೂನ್ 5 ರಂದು 11 ಗಂಟೆಗೆ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಬಲ್ಮಠದಲ್ಲಿ ನಡೆಯಲಿದೆ.
ಈ ಆದಾಲತ್‍ನಲ್ಲಿ ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು ಕೊರತೆಗಳನ್ನು, ತಕರಾರುಗಳನ್ನು ಪರಿಶೀಲಿಸಲಾಗುವುದು.
ಸಾರ್ವಜನಿಕರು ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರಮುಖೇನ ಅಂಚೆ ಅದಾಲತ್ ತಲೆಬರಹದಡಿಯಲ್ಲಿ ಜೂನ್ 4 ರೊಳಗೆ ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಬಲ್ಮಠ, ಮಂಗಳೂರು-575002 ವಿಳಾಸಕ್ಕೆ ಅಥವಾ ದೂರುಗಳನ್ನು ವಾಟ್ಸಾಪ್ ಸಂಖ್ಯೆ 9448291072 ಕಳುಹಿಸಬಹುದು. ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಮಾತ್ರ ಕಳುಹಿಸುವಂತೆ ಮಂಗಳೂರು ಹಿರಿಯ ಅಂಚೆ ಅಧೀಕ್ಷಕರು ವಿಭಾಗ ಇವರ ಪ್ರಕಟಣೆ ತಿಳಿಸಿದೆ.