ಮಂಗಳೂರು (ಜೂನ್ 23):- ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿನ 2020-21ನೇ ಸಾಲಿನ ತೆಂಗು ಫಸಲನ್ನು ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

      ಜುಲೈ 21 ರಂದು ಬೆಳಿಗ್ಗೆ ಕಚೇರಿ ನರ್ಸರಿ ಬಂಟ್ವಾಳ, ಮಧ್ಯಾಹ್ನ ವಿಟ್ಲ ತೋಟಗಾರಿಕೆ ಕ್ಷೇತ್ರ, ಜುಲೈ 22 ರಂದು ಬೆಳಿಗ್ಗೆ ಕಚೇರಿ ನರ್ಸರಿ ಬೆಳ್ತಂಗಡಿ, ಮಧ್ಯಾಹ್ನ ಚಾರ್ಮಾಡಿ ತೋಟಗಾರಿಕೆ ಕ್ಷೇತ್ರ, ಜುಲೈ 23 ರಂದು ಬೆಳಿಗ್ಗೆ ಕಬಕ ತೋಟಗಾರಿಕೆ ಕ್ಷೇತ್ರ, ಮಧ್ಯಾಹ್ನ ಕಚೇರಿ ನರ್ಸರಿ ಸುಳ್ಯ ಹಾಗೂ ಹೊಸಗದ್ದೆ ತೋಟಗಾರಿಕೆ ಕ್ಷೇತ್ರ ಸುಳ್ಯ, ಜುಲೈ 24 ರಂದು ಬೆಳಿಗ್ಗೆ ಪಡೀಲ್ ತೋಟಗಾರಿಕೆ ಕ್ಷೇತ್ರ, ಮಧ್ಯಾಹ್ನ ಜಿಲ್ಲಾ ಸಸ್ಯಗಾರ ಮಂಗಳೂರು ಇಲ್ಲಿನ ತೆಂಗು ಫಸಲನ್ನು ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತದೆ.

  ಸಾರ್ವಜನಿಕರು ಹರಾಜಿನಲ್ಲಿ ಭಾಗವಹಿಸಬಹುದು. ವಿಲೇವಾರಿ ಷರತ್ತುಗಳು ಹಾಗೂ ಹೆಚ್ಚಿನ ವಿವರಗಳಿಗೆ ರಾಜ್ಯ ವಲಯ, ಮಂಗಳೂರು ಹಿರಿಯ ತೋಟಗಾರಿಕೆ ನಿರ್ದೇಶಕರ ಕಚೇರಿ, ಇ ಮೇಲ್ sadhssdk@yahoo.in ದೂರವಾಣಿ ಸಂಖ್ಯೆ 0824 2444298 ನ್ನು ಸಂಪರ್ಕಿಸಲು ಮಂಗಳೂರು ಹಿರಿಯ ತೋಟಗಾರಿಕೆ ನಿರ್ದೇಶಕರ ಪ್ರಕಟಣೆ ತಿಳಿಸಿದೆ.