ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದು ದಿನಾಂಕ 02.06.2020 ಮಂಗಳವಾರದಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಹಾಗೂ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ರವರ ಆದೇಶದ ಮೇರೆಗೆ "ಮಹಿಳಾ ಗರೀಮಾ # ಮಹಿಳೆಯರ ಘನತೆ" ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋರವರ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳು ಇಂದು ಮಂಗಳೂರಿನಿಂದ ಪಶ್ಚಿಮ ಬಂಗಾಲ ಹಾಗೂ ಅಸ್ಸಾಂ ರಾಜ್ಯಕ್ಕೆ ಹೊರಟ ಶ್ರಮಿಕ್ ರೈಲಿನ ಮಹಿಳಾ ಪ್ರಯಾಣಿಕರಿಗೆ "ಮುಟ್ಟಿನ ನೈರ್ಮಲ್ಯ ಕಿಟ್" ನ್ನು ವಿತರಿಸಿದರು. ಮತ್ತು ರೈಲು ಪ್ರಯಾಣದ ಸಂಧರ್ಭದಲ್ಲಿ ಮುಟ್ಟಿನ ನೈರ್ಮಲ್ಯವನ್ನು ಯಾವ ರೀತಿ ಪಾಲಿಸಬೇಕು ಎಂದು ಮಹಿಳಾ ಪ್ರಯಾಣಿಕರಿಗೆ ತಿಳುವಳಿಕೆ ನೀಡಲಾಯಿತು. ಜೊತೆಗೆ ಮಾಸ್ಕ್ ಗಳನ್ನು ವಿತರಿಸಲಾಯಿತು.
ಅಲ್ಲದೆ ಎಲ್ಲಾ ಪ್ರಯಾಣಿಕರಿಗೂ ಬ್ರೆಡ್, ಬಿಸ್ಕತ್ತು, ಬಾಳೆಹಣ್ಣುಗಳನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಕೆ.ಪಿ.ಎಂ.ಸಿ ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮ.ನ.ಪಾ ಸದಸ್ಯೆ ಕುಮಾರಿ ಅಪ್ಪಿ, ದ.ಕ.ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಶೋಭಾ ಕೇಶವ್ , ಮಾಜಿ ಮೇಯರ್ ಹಾಗೂ ಮ.ನ.ಪಾ ಸದಸ್ಯೆ ಜೆಸಿಂತಾ ವಿ.ಆಲ್ಫ್ರೇಡ್, ಮಾಜಿ ಉಪ ಮೇಯರ್ ಹಾಗೂ ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಮಿತಾ ಡಿ. ರಾವ್, ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಾಂತಲಾ ಗಟ್ಟಿ, ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಮಂಜುಳಾ ವೈ ನಾಯಕ್, ಮತ್ತು ರೂಪಾ ಚೇತನ್ ರವರು ಉಪಸ್ಥಿತರಿದ್ದರು.