ಮಂಗಳೂರು: ದಿನಾಂಕ 17.12.2019ರ ಮಂಗಳವಾರದಂದು ಸಂಜೆ 4 ಗಂಟೆಗೆ ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ದ.ಕ ಜಿಲ್ಲಾಧಿಕಾರಿಯವರ ಕಛೇರಿ ಮುಂಭಾಗದಲ್ಲಿ ಕೇಂದ್ರ ಸರಕಾರದ ಎನ್.ಆರ್.ಸಿ ಕಾಯ್ದೆಯ ವಿರುದ್ಧ “ಧರಣಿ ಸತ್ಯಾಗ್ರಹ” ನಡೆಯಲಿದ್ದು, ಈ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್‍ರವರು ತಿಳಿಸಿರುತ್ತಾರೆ ಎಂದು ಉಪಾಧ್ಯಕ್ಷರಾದ ಸದಾಶಿವ್ ಉಳ್ಳಾಲ್‍ರವರು ತಿಳಿಸಿದ್ದಾರೆ.