ಮಂಗಳೂರು:ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಿಸಿದಂತೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಎಲ್ಲ ೬೦ ವಾರ್ಡ್ಗಳಿಗೂ ಸಾಮಾಜಿಕ ನ್ಯಾಯದ ಪ್ರಕಾರ ಟಿಕೆಟ್ ಹಂಚಿಕೆ ಮಾಡಲಾಗಿದೆ. ಟಿಕೆಟ್ ವಂಚಿತರ ಪರವಾಗಿ ಕೆಲವರು ಪತ್ರಿಕಾಗೋಷ್ಠಿ ಕರೆದು ಹಿರಿಯ ನಾಯಕರ ಹೆಸರಿನಲ್ಲಿ ಗೊಂದಲ ಉಂಟು ಮಾಡುವ ಯತ್ನ ಮಾಡುತ್ತಿದ್ದಾರೆ. ಪಕ್ಷದ ಹಿರಿಯ ನಾಯಕರೂ ಮಾರ್ಗದರ್ಶಕರಾದ ಸನ್ಮಾನ್ಯ ಬಿ.ಜನಾರ್ಧನಾ ಪೂಜಾರಿಯವರ ಬೆಂಬಲಿಗರು ಎನ್ನುವ ನೆಪವೊಡ್ಡಿ ಟಿಕೆಟ್ ನೀಡಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. ಎಲ್ಲ ೬೦ ವಾರ್ಡ್ಗಳಲ್ಲೂ ಪೂಜಾರಿ ಬೆಂಬಲಿಗರೆ ಅಂತೆಯೇ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಪೂಜಾರಿಯವರ ಮಾರ್ಗದರ್ಶನದಲ್ಲೇ ಜಿಲ್ಲಾ ಕಾಂಗ್ರೆಸ್ ಸಮಿತಿಯು ಕಾರ್ಯನಿರ್ವಹಿಸುತ್ತಿದ್ದು, ಅವರ ಹೆಸರಿಗೆ ಕಳಂಕ ತರುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದು ಅವರ ಘನತೆಗೆ ಶೋಭೆ ತರುವಂತಹದಲ್ಲ.
ವಾರ್ಡ್ ೧೭ ದೇರೆಬೈಲ್ ಉತ್ತರ ಕ್ಷೇತ್ರದ ಆಕಾಂಕ್ಷಿ ಪುರಂದರದಾಸ್ ಕೂಳೂರುರವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾದ ಬಗ್ಗೆ ಕೆ.ಪಿ.ಸಿ.ಸಿಗೆ ದೂರು ನೀಡಿರುವುದರಿಂದ ಅವರ ಬದಲಿಗೆ ಪೂಜಾರಿಯವರ ಆಪ್ತರೂ, ಅಭಿಮಾನಿ ಆಗಿರುವ ಮಾಜಿ ಉಪಮೇಯರ್ ದಿ|| ಪದಕಣ್ಣಾಯರ ಮೊಮ್ಮಗ ಮಲ್ಲಿಕಾರ್ಜುನರವರಿಗೆ ಟಿಕೆಟ್ ನೀಡಲಾಗಿದೆ. ಎಲ್ಲ ೬೦ ವಾರ್ಡ್ಗಳಲ್ಲಿ ಸ್ವರ್ಧಿಸಿರುವ ಅಭ್ಯರ್ಥಿಗಳು ಬಿ.ಜನಾರ್ಧನಾ ಪೂಜಾರಿಯವರ ಅಭಿಮಾನಿಗಳೇ ಆಗಿದ್ದಾರೆ. ಬಿ. ಜನಾರ್ಧನಾ ಪೂಜಾರಿಯವರು ಕೇವಲ ಒಂದೆರಡು ಸೀಟಿನ ಆಯ್ಕೆಗೆ ತಮ್ಮನ್ನು ಮಿತಿಗೊಳಿಸಿದವರಲ್ಲ.
ಅವರ ಶಿಫಾರಸ್ಸನ್ನು ಪಕ್ಷವು ಎಂದೂ ತಳ್ಳಿಹಾಕುವುದಿಲ್ಲ. ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಿಗೆ ಜನಾರ್ಧನ ಪೂಜಾರಿಯವರ ಆಶೀರ್ವಾದ ಇದ್ದೇ ಇದೆ. ಅವರ ಆಶೀರ್ವಾದದಿಂದ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಪೂರ್ಣ ಬಹುಮತದಿಂದ ಅಧಿಕಾರ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರಲಿದೆ.