ಮಂಗಳೂರು:- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದೆರ್ ಕುಡ್ಲ ಮತ್ತು ತುಳುವ ಬೊಳ್ಳಿ ಪ್ರತಿಷ್ಠಾನ ಇದರ ಸಹಭಾಗಿತ್ವದಲ್ಲಿ ನಮ್ಮ ಟಿವಿ ಅರ್ಪಿಸುವ ‘’ನಾಟಕ ಪರ್ಬ’ ಇದರ ಎರಡನೇಯ ದಿನದ ಕಾರ್ಯಕ್ರಮದ ಉದ್ಘಾಟನೆಯು ತುಳುಭವನದ ಸಿರಿಚಾವಡಿಯಲ್ಲಿ ಅಕ್ಟೋಬರ್ 15 ರಂದು ನಡೆಯಿತು.
‘ತುಳು ಭಾಷಾ ಸಾಹಿತ್ಯಕ್ಕೆ ಸರಕಾರ ಇತ್ತ ತುಳು ಅಕಾಡೆಮಿಯತ್ತ ತೆರೆಮರೆಯಲ್ಲಿ ಇದ್ದ ಕಲಾವಿದರೆಲ್ಲರೂ ಆಗಮಿಸಿ ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಲು ಅವಕಾಶ ತುಳು ಅಕಾಡೆಮಿ ಕಲ್ಪಿಸಿದೆ ,ರಂಗ ಕಲೆಗೆ ಕವಿದಿರುವಂತ ಕತ್ತಲೆಯನ್ನು ಸರಿಸಿದ್ದಾರೆ ಕತ್ತಲ್ಸಾರ್ ಸಹಿತ ಅಕಾಡೆಮಿಯ ಕೂಟ’ ಎಂದು ಹಿರಿಯ ನಾಟಕ ಕಲಾವಿದ ನಿರೂಪಕ ಮಂಜು ವಿಟ್ಲ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ನಡೆಯುವ ಏಳು ದಿನಗಳ ನಾಟಕ ಪರ್ಬದ ಎರಡನೇಯ ದಿನವನ್ನು ಉದ್ಘಾಟಿಸಿ, ಮಾತನಾಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್‍ಸಾರ್ ಅವರು ‘ಹೃದಯಸ್ಪರ್ಶಿ ಕಠಾ ಹಂದರದೊಂದಿಗೆ ನವರಸ ಅಭಿನಯದ ಮುಖೇನ ನಿತ್ಯ ಬದುಕಿನ ಓರೆ ಕೋರೆಗಳಿಗೆ ಬೆಳಕು ಚೆಲ್ಲಿ ವಾಸ್ತವನ್ನು ತೋರಿಸುವ ದರ್ಪಣ ಈ ನಾಟಕ ಪರ್ಬ.ಈ ನಾಟಕಪರ್ಬವನ್ನು ರಂಗಭೂಮಿಗಾಗಿ ನಿಸ್ವಾರ್ಥ ವಾಗಿ ತಮ್ಮನ್ನು ತಾವು ತೇದು ಕಲಾಸರಸ್ವತಿಯ ಮಡಿಲು ಸೇರಿದ ದಿವ್ಯ ಚೇತನಗಳಿಗೆ ಸಮರ್ಪಣೆ ಕೊರೋನಾದ ಕತ್ತಲೆ ಕಲಾವಿದರಿಗೆ ಕವಿದಾಗ ಕಲಾಶ್ರಯದ ಬೆಳಕು ಹರಿಸಿ ಹೊಸ ಚೈತನ್ಯ ಕಲಾವಿದರಿಗೆ, ಕಲಾಭಿಮಾನಿಗಳಿಗೆ ತುಂಬುವುದಕ್ಕಾಗಿ ಈ ಎಲ್ಲಾ ರೀತಿಯ ಕಲಾ ಪ್ರಕಾರವನ್ನು ಅಕಾಡೆಯ ಸಿರಿ ಚಾವಡಿಯಲ್ಲಿ ಹಮ್ಮಿ ಕೊಂಡಿದ್ದೇವೆ ‘’ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಂಗಮ ಕಲಾವಿದರು ಉಜಿರೆ ಇದರ ನಿರ್ದೇಶಕರಾದ ಗಿರೀಶ್ ಹೊಳ್ಳ , ಅಧ್ಯಕ್ಷರಾದ ರಮೇಶ್ ಪೈಲಾರು, ಹಿರಿಯ ರಂಗಭೂಮಿ ಕಲಾವಿದ , ನಿರೂಪಕ ರಾಮಚಂದ್ರ ಭಟ್, ಅಕಾಡೆಮಿಯ ಸದಸ್ಯರಾದ ನರೇಂದ್ರ ಎಂ. ಪೂಜಾರಿ, ಚೇತಕ್ ಪೂಜಾರಿ ಉಪಸ್ಥಿತರಿದ್ದರು. ಪ್ರಶಾಂತ್ ಸಿ.ಕೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಗಮ ಕಲಾವಿದರು ಉಜಿರೆ ಇವರಿಂದ ‘ತೂಯೆರೆ ಬರ್ಪೆರ್’ಎಂಬ ತುಳು ನಾಟಕ ಪ್ರದರ್ಶನ ನಡೆಯಿತು.