ಮಂಗಳೂರು: ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ನವೆಂಬರ್ ತಿಂಗಳ ಮೊದಲನೇ ವಾರದಲ್ಲಿ ಅಂತರಾಷ್ಟ್ರೀಯ ಫುಲ್‍ಡೋಮ್ ಸಮ್ಮೇಳನ ಆಯೋಜನೆಗೊಂಡಿದ್ದು ಪೂರ್ವಭಾವಿಯಾಗಿ ತಾರಾಲಯದ ನಿರ್ವಹಣಾ ಕೆಲಸವಿರುವುದರಿಂದ ಅಕ್ಟೋಬರ್ 25 ರಂದು (ಒಂದು ದಿನ) ಸಾರ್ವಜನಿಕರಿಗೆ ತಾರಾಲಯ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಉಳಿದ ಎಲ್ಲಾ ವೀಕ್ಷಣೆಗಳು ಎಂದಿನಂತೆ ಇದ್ದು ಸಾರ್ವಜನಿಕರು ಸಹಕರಿಸಲು ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.