ಮಂಗಳೂರು ಮಾರ್ಚ್ 05 (ಕರ್ನಾಟಕ ವಾರ್ತೆ):- ಕೆಎಸ್‍ಆರ್‍ಟಿಸಿ ನಿಗಮವು  ಬೆಂಗಳೂರಿನಿಂದ ಹಾಸನ, ಮಂಗಳೂರು, ಉಡುಪಿ ಮಾರ್ಗವಾಗಿ ಮಣಿಪಾಲಕ್ಕೆ ಹಾಗೂ ಮಣಿಪಾಲದಿಂದ ಅದೇ ಮಾರ್ಗವಾಗಿ ಬೆಂಗಳೂರಿಗೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಕ್ಲಬ್‍ಕ್ಲಾಸ್ ಮಲ್ಟಿಆಕ್ಸ್‍ಲ್ ವೋಲ್ವೋ ಬಸ್ ಸಾರಿಗೆಯನ್ನು ಮಾರ್ಚ್ 6 ರಿಂದ ಬೆಂಗಳೂರಿನಿಂದ ಪ್ರಾರಂಭಿಸಲು ಯೋಜಿಸಲಾಗಿರುತ್ತದೆ.

     ಸದರಿ ಬಸ್  ಬೆಂಗಳೂರು ಬಸ್ಸು ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಹೊರಟು  ಮಂಗಳೂರು ಬೆಳಗ್ಗೆ 4.15 ಗಂಟೆ, ಉಡುಪಿ 5.15 ಗಂಟೆ ಮಾರ್ಗವಾಗಿ ಮಣಿಪಾಲಕ್ಕೆ ಬೆಳಿಗ್ಗೆ 5. 30 ಗಂಟೆಗೆ ತಲುಪುವುದು ಹಾಗೂ  ಮರು ಪ್ರಯಾಣದಲ್ಲಿ ಮಣಿಪಾಲದಿಂದ ಮಧ್ಯಾಹ್ನ 3.30 ಗಂಟೆಗೆ ಹೊರಟು  ಮಂಗಳೂರಿಗೆ  ಸಂಜೆ 5 ಗಂಟೆಗೆ  ಬಂದು ಬೆಂಗಳೂರಿಗೆ ರಾತ್ರಿ 1 ಗಂಟೆಗೆ ತಲುಪುವುದು.

      ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು ಸಾರ್ವಜನಿಕರು ಸದರಿ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೆಎಸ್‍ಆರ್‍ಟಿಸಿ   ವಿಭಾಗೀಯ ನಿಯಂತ್ರಣಾಧಿಕಾರಿಗಳ  ಪ್ರಕಟಣೆ ತಿಳಿಸಿದೆ.