ಮಂಗಳೂರು:-  ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಾಹಿತ್ಯ, ದಫ್, ಬುರ್ದಾ, ಗಾಯನ, ನಾಟಕ, ಸಿನಿಮಾ, ಕೋಲ್ಕಲಿ, ಒಪ್ಪನೆ, ಕೈಕೊಟ್ಟು ಪಾಟ್, ತಾಲೀಮು ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದರಿಗೆ ಪ್ರತಿ ತಿಂಗಳು ರೂ.2000 ರಂತೆ ಕಲಾವಿದರ ಮಾಸಾಶನ ಮಂಜೂರು ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

 ಅರ್ಹ ಕಲಾವಿದರು ಮತ್ತು ಸಾಹಿತಿಗಳು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಸ್ಕ್ರತಿ ಇಲಾಖೆ, ತುಳುಭವನ, ಉರ್ವಾಸ್ಟೋರ್, ಮಂಗಳೂರು ಈ ಕಚೇರಿಯಿಂದ ನಿಗದಿತ ನಮೂನೆಯ ಅರ್ಜಿಯನ್ನು  ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಸಲ್ಲಿಸಬೇಕು.

   ಅರ್ಜಿದಾರರು ಸಂಬಂಧಿತ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಾಗೂ ಕಷ್ಟ ಪರಿಸ್ಥಿತಿಯಲ್ಲಿರುವ ಕಲಾವಿದರು ಮಾಸಾಶನ ಪಡೆಯಲು ಅರ್ಜಿ ಸಲ್ಲಿಸಬಹುದು. ಮೂಲ ದಾಖಲೆಗಳನ್ನು ಪರಿಶೀಲನೆಗೊಳಪಡಿಸಬೇಕು.    ಸಾಹಿತಿ/ಕಲಾವಿದರು ಕನಿಷ್ಠ 58 ವಯೋಮಾನದವರಾಗಿಬೇಕು. ಅಂಗವಿಕಲರಾಗಿದ್ದಲ್ಲಿ ಕನಿಷ್ಠ 40 ವರ್ಷದ ವಯೋಮಾನದವರಾಗಿಬೇಕು.     ಕಲಾವಿದರು ತಹಶೀಲ್ದಾರ್ ಅವರಿಂದ ಪಡೆದ ವಾರ್ಷಿಕ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. (ಗ್ರಾಮಾಂತರ ಪ್ರದೇಶಗಳಿಗೆ ರೂ. 40000/- ಹಾಗೂ ಪಟ್ಟಣ ಪ್ರದೇಶಗಳಿಗೆ ರೂ. 50000/- ಗರಿಷ್ಠ ಆದಾಯ ಮಿತಿಗೆ ಒಳಪಟ್ಟಂತೆ ಆದಾಯ ಹೊಂದಿರಬೇಕು.)

      ಈಗಾಗಲೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ಬೇರೆ ಬೇರೆ ಯೋಜನೆಗಳಡಿಯಲ್ಲಿ ಮಾಸಾಶನ ಪಡೆಯುತ್ತಿದ್ದಲ್ಲಿ ಈ ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸುವಂತಿಲ್ಲ.   ಅರ್ಜಿದಾರರು ಮಾಸಾಶನ ಅರ್ಜಿಯನ್ನು ದ್ವಿಪ್ರತಿಯಲ್ಲಿ ದಾಖಲೆಗಳೊಂದಿಗೆ ಲಗತ್ತಿಸಿರಬೇಕು. ಭಾವಚಿತ್ರಗಳನ್ನು ಅರ್ಜಿಯ ಮೇಲೆ ಲಗತ್ತಿಸಿ ಗಜೆಟೆಡ್ ಅಧಿಕಾರಿಯಿಂದ ದೃಢೀಕರಣ ಪಡೆಯಬೇಕು.  ಮಾಸಾಶನ ಅರ್ಜಿಯನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಇಲಾಖೆಯ ಮುಖ್ಯಸ್ಥರು ಹೊಂದಿರುತ್ತಾರೆ.

      ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸಾಮಥ್ರ್ಯ ಸೌಧ, 2ನೇ ಮಹಡಿ, ಮಂಗಳೂರು ತಾಲೂಕು ಪಂಚಾಯತ್ ಹಳೇ ಕಟ್ಟಡ, ಮಿನಿವಿಧಾನಸೌಧದ ಬಳಿ, ಮಂಗಳೂರು ಅಥವಾ ದೂರವಾಣಿ ಸಂಖ್ಯೆ: 0824-2412297, 7483946578 ಸಂಪರ್ಕಿಸಬಹುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.