ಮಂಗಳೂರು: ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ದಿವಂಗತ ಇಂದಿರಾ ಗಾಂಧಿಯವರ 102 ನೇ ಜನ್ಮ ದಿನಾಚರಣೆಯನ್ನು ದಕ್ಷಿಣ ಕನ್ನಡ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳೂರು ನಗರದ ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ದ.ಕ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮ.ನ.ಪಾ ನೂತನ ಸದಸ್ಯೆ ಝೀನತ್ ಸಂಶುದ್ದೀನ್, ದ.ಕ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ದೇವಕಿ, ಉಷಾ ಶರತ್, ಸುರೇಖಾ ಉಳ್ಳಾಲ, ನಮಿತಾ ಡಿ.ರಾವ್, ಶಾಂತಲಾ ಗಟ್ಟಿ, ಶೋಭಾ ಕೇಶವ್, ಮಲ್ಲಿಕಾ ಪಕ್ಕಳ, ಪ್ರವೀಣಾ ಆರ್, ತನ್ವೀರ್ ಶ್ಹಾ, ಮಮತಾ ಶೆಟ್ಟಿ, ಗೀತಾ ಅತ್ತಾವರ, ಗೀತಾ ಪ್ರವೀಣ್, ಸಬೀತಾ ಮಿಸ್ಕಿತ್, ರೂಪಾ ಚೇತನ್, ಮಂಜುಳಾ ವೈ.ನಾಯಕ್ , ಜ್ಯೋತಿ ಎಲ್.ದೇವಾಡಿಗ, ಆಶಾಲತಾ, ವಿನುತಾ ರಾವ್, ಸರಸ್ವತಿ ಸಾಲಿಯಾನ್, ವಿಕ್ಟೋರಿಯಾ, ಸೆಲೆಸ್ತಿನ್ ಕ್ರಾಸ್ತಾ ಮತ್ತಿತರರು ಉಪಸ್ಥಿತರಿದ್ದರು.