ಮಂಗಳೂರು : 2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಸಪ್ಟೆಂಬರ್ ಮಾಹೆಯಲ್ಲಿ ಜಿಲ್ಲಾದ್ಯಂತ ಆರಂಭವಾಗುತ್ತಿದೆ. ಸಮೀಕ್ಷೆ ನಡೆಸುವವರಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸಿಬ್ಬಂದಿಗಳು ಹಾಗೂ ಆಯಾ ಗ್ರಾಮದವರೇ ಆದ ಯುವಕರು ಬೆಳೆ ಸಮೀಕ್ಷೆಯನ್ನು ಮೊಬೈಲ್ ತಂತ್ರಾಂಶದ ಮೂಲಕ ಕೈಗೊಳ್ಳುತ್ತಾರೆ.

ಮೊಬೈಲ್ ತಂತ್ರಾಂಶದ ಮೂಲಕ ನಡೆಸುವ ಬೆಳೆ ಸಮೀಕ್ಷೆ ಆಧಾರದ ಮೇಲೆಯೇ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ, ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಇತ್ಯಾದಿಗಳು ನಿರ್ಧಾರವಾಗುವುದರಿಂದ ರೈತರು ತಾವು ಬೆಳೆದ ಬೆಳೆಗಳನ್ನು ಖುದ್ದು ಹಾಜರಿದ್ದು ಸಮೀಕ್ಷೆಗಾರರಿಗೆ ತೋರಿಸಬೇಕು. ಬೆಳೆ ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾಗುವ ಸಿಬ್ಬಂದಿಗಳಿಗೆ ಜಮೀನನ್ನು ಮತ್ತು ಬೆಳೆದಿರುವ ಬೆಳೆಯನ್ನು ತೋರಿಸುವುದರ ಮೂಲಕ ಸಹಕರಿಸಬೇಕು. ರೈತರು ತಮ್ಮ ಮೊಬೈಲ್ ನಂಬರನ್ನು ಬೆಳೆ ಸಮೀಕ್ಷೆ ಮಾಡುವ ಯುವಕರಿಗೆ ನೀಡಬೇಕು. ಇದರಿಂದ ಬೆಳೆದಿರುವ ಬೆಳೆ ಮಾಹಿತಿ ಬಗ್ಗೆ ಮೆಸೇಜ್ ಕಳುಹಿಸಲು ಸಾಧ್ಯವಾಗುತ್ತದೆ. ಎಂದು  ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.