ಮಂಗಳೂರು : ಯುಪಿಎಲ್ ಹರಾಜು ಪ್ರಕ್ರಿಯೆಅಂತ್ಯ, ಫೆ.18 ರಂದು ಪಂದ್ಯಾವಳಿ


ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯಕಾಲೇಜು ಮಂಗಳೂರಿನ ಪ್ರತಿಷ್ಠಿತಯುನಿವರ್ಸಿಟಿ ಪ್ರೀಮಿಯರ್ ಲೀಗ್ (ಯುಪಿಎಲ್)  ಚುಟುಕುಕ್ರಿಕೆಟ್ ಪಂದ್ಯಾವಳಿಯ ಹರಾಜು ಪ್ರಕ್ರಿಯೆ ಮಂಗಳವಾರ  ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು.

ಯುಪಿಎಲ್‍ಕ್ರಿಕೆಟ್ ಪಂದ್ಯಾವಳಿಯು ವಿವಿ ಕಾಲೇಜಿನಕ್ರೀಡಾಂಗಣದಲ್ಲಿಇದೇ ಫೆಬ್ರವರಿ 18 ರಂದು ಬೆಳಗ್ಗೆ 9 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ. ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ ಪ್ರಾಂಶುಪಾಲ ಡಾಉದಯಕುಮಾರ್ ಎಂ.ಎ, ಯುಪಿಎಲ್ ಪಂದ್ಯಾವಳಿಯು ಕಾಲೇಜಿನ ಉಳಿದ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿರಲಿ ಎಂದು ಶುಭಹಾರೈಸಿದರು.

ಪಂದ್ಯವಳಿಯಲ್ಲಿ 2 ವಿದ್ಯಾರ್ಥಿನಿಯರತಂಡ ಸೇರಿದಂತೆ, ಒಟ್ಟು 8 ತಂಡಗಳು ಭಾಗವಹಿಸಲಿವೆ. ತಂಡಗಳನ್ನು ಯುಸಿಎಮ್ ವಾರಿಯರ್ಸ್ , ಯುಸಿಎಮ್ ಬ್ರಿಗೇಡ್, ಯುಸಿಎಮ್ ಜಾಗ್ವಾರ್ಸ್, ಯುಸಿಎಮ್ ಇಲವೆನ್ಸ್, ಯುಸಿಎಮ್ ಸ್ಟ್ರೈಕರ್ಸ್, ಯುಸಿಎಮ್ ರಾಯಲ್ಸ್, ಯುಸಿಎಮ್ ಪಿಂಕ್ ಪ್ಯಾಂಥರ್ಸ್ ಹಾಗೂ ಯುಸಿಎಮ್ ಬ್ಲೂಏಂಜೆಲ್ಸ್. ಪ್ರತಿಯೊಂದುತಂಡಕ್ಕೂ ಪ್ರಾಧ್ಯಾಪಕರು ಮಾಲೀಕರಾಗಿರುತ್ತಾರೆ ಮತ್ತು ಪ್ರತಿ 6 ವಿದ್ಯಾರ್ಥಿಗಳ ತಂಡದಲ್ಲೂಒಬ್ಬರು ಪ್ರಾಧ್ಯಾಪಕರುಆಡಲಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿಕಾಲೇಜಿನದೈಹಿಕ ಶಿಕ್ಷಣ ಉಪ ನಿರ್ದೇಶಕಡಾ. ಕೇಶವಮೂರ್ತಿ, ವಿದ್ಯಾರ್ಥಿ ಸಂಘದ ನಾಯಕ ಸಂಪತ್ ಬಿ ಮತ್ತುಕ್ರೀಡಾ ಕಾರ್ಯದರ್ಶಿ ಮನೀಶ್‍ಕುಮಾರ್ ಹಾಗೂ ಕಾವ್ಯಾ, ಮತ್ತು ತಂಡಗಳ ಮಾಲೀಕರು ಉಪಸ್ಥಿತರಿದ್ದರು.


You can share this post!

ಪುತ್ತೂರು: ಫೆ. 17 ರಂದು ಫಿಲೋಮಿನಾ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದಲ್ಲಿ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ

ಮಂಗಳೂರು : ಅಸಂಘಟಿತ ಕಾರ್ಮಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ : ಅರ್ಜಿ ಅಹ್ವಾನ

Leave Comments