ಮಂಗಳೂರು (ಸೆಪ್ಟೆಂಬರ್ 10):- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯುವಜನರ ಮತ್ತು ಕ್ರೀಡಾಪಟುಗಳಿಗಾಗಿ ಹಲವಾರು ಸೇವೆಗಳನ್ನು ಒದಗಿಸುತ್ತಿದ್ದು,  ಈ ಸೇವೆಗಳ ಪೈಕಿ  ಯುವ ಸಂಘಗಳ ನೊಂದಣಿ ಸೇವೆಯನ್ನು  ಸಕಾಲ ಸೇವೆಯನ್ನಾಗಿ  ಒದಗಿಸಿ  ಆನ್‍ಲೈನ್ ಅರ್ಜಿ ಸ್ವೀಕೃತಿ ತಂತ್ರಾಂಶದ (ಸೇವಾ ಸಿಂಧು) ಬಳಕೆಯನ್ನು  ಕಡ್ಡಾಯಗೊಳಿಸಿ ಮತ್ತು  ಮ್ಯಾನುವಲ್  ಆಗಿ ಅರ್ಜಿ ಸ್ವೀಕರಿಸುವುದನ್ನು ನಿಲ್ಲಿಸಿ ಸರ್ಕಾರವು ಆದೇಶ ಹೊರಡಿಸಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಂಘಗಳು ನೊಂದಣೆ ಸೇವೆ ಪಡೆಯಲು  Seva Sindhu  ಆನ್‍ಲೈನ್  ಮೂಲಕ  ಅರ್ಜಿ ಸಲ್ಲಿಸಬಹುದು.

      ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು  ಕ್ರೀಡಾ ಇಲಾಖೆ,  ಮಂಗಳಾ ಕ್ರೀಡಾಂಗಣ, ಮಂಗಳೂರು ಅಥವಾ ದೂರವಾಣಿ ಸಂಖ್ಯೆ: 0824-2451264 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.