ಮಂಗಳೂರು : ಜೂನ್ 10 ಕರ್ನಾಟಕ ವಾರ್ತೆ:- ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಕ್ಫ್ ನೊಂದಾಯಿತ ಮಸೀದಿ, ದರ್ಗಾ ಸಂಸ್ಥೆಗಳು 2019-20 ನೇ ಸಾಲಿನ (ಎಪ್ರಿಲ್ 2019 ರಿಂದ ಮಾರ್ಚ್ 2020) ವಾರ್ಷಿಕ ಆಯವ್ಯಯ ಪಟ್ಟಿಯನ್ನು ನಿಗದಿತ ನಮೂನೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಕಛೇರಿಗೆ ಜೂನ್ ತಿಂಗಳೊಳಗಾಗಿ ಕಡ್ಡಾಯವಾಗಿ ಸಲ್ಲಿಸಬೇಕು.  ನಮೂನೆಗಳು ಜಿಲ್ಲಾ ವಕ್ಫ್ ಕಚೇರಿಯಲ್ಲಿ ಪಡೆದುಕೊಳ್ಳಬಹುದು ಪ್ರಕಟಣೆ ತಿಳಿಸಿದೆ.