ಮಂಗಳೂರು,(ಮಾರ್ಚ್ 06):- ಮಂಗಳೂರು ವಿಶ್ವವಿದ್ಯಾನಿಲಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠ, ಮಂಗಳಗಂಗೋತ್ರಿ ಇವರ ವತಿಯಿಂದ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ವಚನಸಾರ ಪ್ರಸರಣೋಪನ್ಯಾಸ ಮಾಲಿಕೆ: 2020-21 ಕಾರ್ಯಕ್ರಮವನ್ನು ವಚನ ಸಾಹಿತ್ಯದಲ್ಲಿ ಅರಿವಿನ ನೆಲೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಮಾರ್ಚ್ 9, 16 ಹಾಗೂ 19 ರಂದು ವಿವಿಧ ಕಾಲೇಜುಗಳಲ್ಲಿ ಆಯೋಜಿಸಲಾಗಿದೆ.
ಮಾರ್ಚ್ 9 ರಂದು ಬೆಳಿಗ್ಗೆ 11 ಗಂಟೆಗೆ ‘ಅಂಬಿಗರ ಚೌಡಯ್ಯನ ವಚನಗಳಲ್ಲಿ ವೈಚಾರಿಕತೆ’ ಎಂಬ ವಿಷಯದ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಧರ್ ರಾವ್ ಎಂ.ಎಸ್. ರವರ ಅಧ್ಯಕ್ಷತೆಯಲ್ಲಿ ವಚನಸಾರ ಪ್ರಸರಣೋಪನ್ಯಾಸ ಕಾರ್ಯಕ್ರಮವು ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಕುರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾರ ಡಾ. ಲತಾ ಅಭಯ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ.
ಮಾರ್ಚ್ 16 ರಂದು ಬೆಳಿಗ್ಗೆ 11 ಗಂಟೆಗೆ ‘ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಾಯಕ ನಿಷ್ಠೆ’ ಎಂಬ ವಿಷಯದ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಜಾ ಜೆ. ರವರ ಅಧ್ಯಕ್ಷತೆಯಲ್ಲಿ ವಚನಸಾರ ಪ್ರಸರಣೋಪನ್ಯಾಸ ಕಾರ್ಯಕ್ರಮವು ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಮಂಜುನಾಥ ಎಂ.ಎಂ. ರವರು ಆಗಮಿಸಲಿದ್ದಾರೆ.
ಮಾರ್ಚ್ 19 ರಂದು ಮಧ್ಯಾಹ್ನ 2 ಗಂಟೆಗೆ ‘ಅಂಬಿಗರ ಚೌಡಯ್ಯ: ಅನುಭಾವಿ ಮನಸ್ಸು, ಅನುಭವದ ಭಾಷೆ ಎಂಬ ವಿಷಯದ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ನಾರಾಯಣ ಪೂಜಾರಿ ರವರ ಅಧ್ಯಕ್ಷತೆಯಲ್ಲಿ ವಚನಸಾರ ಪ್ರಸರಣೋಪನ್ಯಾಸ ಕಾರ್ಯಕ್ರಮವು ಮುಲ್ಕಿ ವಿಜಯ ಕಾಲೇಜಿನಲ್ಲಿ ಜರಗಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕನ್ನಡ ಉಪನ್ಯಾಸಕರಾದ ಸುಧಾರಾಣಿ ಆಗಮಿಸಲಿದ್ದಾರೆ.