ಮಂಗಳೂರು: ಪ್ರಸಕ್ತ ಸನ್ನಿವೇಶದಲ್ಲಿ ಕೋರೋಣ ಎಂಬ ಮಹಾಮಾರಿಯಿಂದ ಸಾವು ನೋವು ಅನುಭವಿಸಿದವರಿಗಿಂತ ಹಸಿವಿನಿಂದ ನರಳಿದವರೇ ಹೆಚ್ಚು, ಊರು ಸೇರುವ ಹಂಬಲದಲ್ಲಿ ಮಸನ ಸೇರಿದವರೂ ಇದ್ದಾರೆ. ಕೋರೋಣದಿಂದ ಪಾರಾಗಲು ಶ್ರಮಿಸುವ ವಾರಿಯರ್ಸ್ ಒಂದೆಡೆಯಾದರೆ ಹಸಿವು ತಣಿಸುವ ವಾರಿಯರ್ಸ್ ಒಂದೆಡೆ.

ಮಂಗಳೂರಿನಲ್ಲಿ ವಲಸಿಗರ ಹಸಿವು ನೀಗಿಸುವುದರಲ್ಲಿ ಕೋರೋಣವನ್ನೂ ಲೆಕ್ಕಿಸದೆ ಕಾರ್ಯಪ್ರವೃತ್ತರಾದವರಲ್ಲಿ ಎದ್ದು ಕಾಣುವ ಹೆಸರೇ 'ಟೀಂ ಮಿಥುನ್ ರೈ', ಪ್ರೀಮಸ್ & ಅಲ್ಫಾಝ್ ನೇತೃತ್ವದಲ್ಲಿ ಈ ತಂಡವು ಸುಮಾರು 25 ದಿನಗಳ ಕಾಲ ಪ್ರತಿದಿನ 500 ಕ್ಕೂ ಹೆಚ್ಚು ವಲಸಿಗರಿಗೆ ಊಟ ಬಡಿಸಿದೆ. ಲಾಕ್ಡೌನಿನ ಮೊದಲ ದಿನ ಬರೀ 100 ಜನರಿಗಾಗುವಷ್ಟು ಊಟ ತಯಾರಿಸಿ ಹೊರಟ ತಂಡಕ್ಕೆ ಅಲ್ಲಿ 500 ಜನರ ಹಸಿವು ಕಂಡಿತ್ತು ಮಕ್ಕಳ ಕೂಗು ಬಡವನ ಹಸಿವು ಅವರನ್ನು ಇನ್ನಷ್ಟು ಪ್ರೇರೇಪಿಸಿತು ಹಾಗೆ ಆ ಪುಟ್ಟ ಮಕ್ಕಳಲ್ಲಿ ಲಾಕ್ಡೌನ್ ಇರುವಷ್ಟು ದಿನ ನಿಮ್ಮ ಹಸಿವು ತೀರಿಸುವೆವು ಎಂದು ಮಾತು ನೀಡಿದ ಟೀಂ ಮಿಥುನ್ ರೈ ಮಂಗಳೂರಿನ ಹಲವು ಕಡೆಗಳಿಗೆ ಸಾಗಿ ತಣ್ಣೀರ್ ಬಾವಿ, ಉರ್ವ, ಕದ್ರಿ, ಮಿಲಾಗ್ರಿಸ್, ಬಿಜೈಯಲ್ಲಿರುವ ಬಡ ಕಾರ್ಮಿಕರನ್ನು ಪತ್ತೆ ಹಚ್ಚಿ ಅವರ ಬಾಗಿಲಿಗೆ ಹೋಗಿ ಊಟ ನೀಡುತಿದ್ದರು, ತಾವು ನೀಡಿದ ಮಾತಿನಂತೇ ಅವರಿಗೆ ಅವಶ್ಯವಿದ್ದಷ್ಟು ದಿನ ಒಟ್ಟಾಗಿ 14000 ಮಂದಿಗಾಗುವಷ್ಟು ಊಟ ನೀಡಿ ಬಿಸಿಲಿನ ಬೇಗೆಯನ್ನು ಲೆಕ್ಕಿಸದೇ ಅವರವರ ಬಾಗಿಲಿಗೆ ಹೋಗಿ, ಮಜಾ ಮಾಡುವ ಪ್ರಾಯದ ಯುವಕರು ಸಮಾಜದ ಬಗ್ಗೆ ಕಾಳಜಿ ವಹಿಸಿದ್ದರು. ಕೆಲವು ವಲಸೆ ಕಾರ್ಮಿಕರಿಗೆ ಉಪವಾಸದ ಸಂದರ್ಭದಲ್ಲಿ ಇಫ್ತಾರಿನ ವ್ಯವಸ್ಥೆಯನ್ನೂ ಈ ತಂಡ ಮಾಡಿಕೊಟ್ಟಿದೆ, ಸಮಾಜ ಸೇವೆಗೆ ಜಾತಿಯ ಅವಶ್ಯಕತೆ ಇಲ್ಲವೆಂದು ತೋರಿಸಿ ಕೊಟ್ಟಿದೆ ಟೀಂ ಮಿಥುನ್ ರೈ.