ಮಂಗಳೂರು (ಆಗಸ್ಟ್ 29):- ಶಿಶು ಅಭಿವೃದ್ಧಿ ಯೋಜನೆ ವಿಟ್ಲದಲ್ಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಗ್ರಾಮ ಪಂಚಾಯತ್ ಮಟ್ಟದ ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗೆ  ಅರ್ಜಿ ಆಹ್ವಾನಿಸಿದೆ.

  ವಿಕಲಚೇತನ ಪುನರ್ವಸತಿ ಕಾರ್ಯಕರ್ತರ ಹುದ್ದೆ ಖಾಲಿ ಇರುವ ಗ್ರಾಮ ಪಂಚಾಯತ್‍ಗಳ ವಿವರ ಇಂತಿವೆ:- ಪೆರ್ನೆ ಗ್ರಾಮ ಪಂಚಾಯತ್, ಇಡ್ಕಿದು ಗ್ರಾಮ ಪಂಚಾಯತ್, ಅನಂತಾಡಿ ಗ್ರಾಮ ಪಂಚಾಯತ್, ಮಂಚಿ ಗ್ರಾಮ ಪಂಚಾಯತ್, ಇರಾ ಗ್ರಾಮ ಪಂಚಾಯತ್, ಕೆದಿಲ ಗ್ರಾಮ ಪಂಚಾಯತ್, ಪೆರುವಾಯಿ ಗ್ರಾಮ ಪಂಚಾಯತ್, ಸಾಲೆತ್ತೂರು ಗ್ರಾಮ ಪಂಚಾಯತ್, ಬರಿಮಾರು ಗ್ರಾಮ ಪಂಚಾಯತ್, ಕರೋಪಾಡಿ ಗ್ರಾಮ ಪಂಚಾಯತ್, ಕಡೇಶ್ವಾಲ್ಯ ಗ್ರಾಮ ಪಂಚಾಯತ್.

   ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರ್ಹ ವಿಕಲಚೇತನ ಅಭ್ಯರ್ಥಿಗಳು ಇದ್ದಲ್ಲಿ ಅರ್ಜಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ವಿಟ್ಲ,  ರಿಹಾ ಪ್ಲಾನೆಟ್ ಚಂದ್ರನಾಥ ಬಸದಿ ಎದುರು, ವಿಟ್ಲ,  ಬಂಟ್ವಾಳ ತಾಲೂಕು ಇಲ್ಲಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನ.

   ಷರತ್ತುಗಳು ಇಂತಿವೆ:- ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಅಂಗವಿಕಲತೆಯ ಪ್ರಮಾಣ ಶೇ. 40 ರಷ್ಟಿರಬೇಕು. ವಯೋಮಿತಿ 18 ವರ್ಷದಿಂದ 45 ವರ್ಷದ ಆರೋಗ್ಯವಂತರಾಗಿರಬೇಕು. ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು, ಇಲ್ಲವಾದಲ್ಲಿ ಅನುತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ವಿಕಲಚೇತನರಾಗಿರಬೇಕು  ಭಾಗಶಃ ಅಂಧರಿಗೆ, ಭಾಗಶಃ ಶ್ರವಣದೋಷವುಳ್ಳದವರಿಗೆ (ಮೈಲ್ಡ್ ಮತ್ತು ಮಾಡರೇಟ್) ಮತ್ತು ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸಲಾಗುವುದು. ವಿಕಲಚೇತನ ಅಭ್ಯರ್ಥಿಯ ಭಾವಚಿತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

    ಲಗತ್ತಿಸಬೇಕಾದ ದಾಖಲೆಗಳು ಇಂತಿವೆ:- ನಿಗದಿತ ನಮೂನೆಯ ಅರ್ಜಿ, ವಿಕಲಚೇತನ ಅಭ್ಯರ್ಥಿಯ ಭಾವಚಿತ್ರ, ವಿಕಲಚೇತನರ ಗುರುತಿನ ಕಾರ್ಡಿನ ಜೆರಾಕ್ಸ್ ಪ್ರತಿ, ಯು.ಡಿ.ಐ.ಡಿ. ಕಾರ್ಡ್ ಪ್ರತಿ, ಎಸ್.ಎಸ್.ಎಲ್.ಸಿ ಅಂಕಪಟ್ಟಿ ಜೆರಾಕ್ಸ್ ಪ್ರತಿ, ರೇಶನ್ ಕಾರ್ಡಿನ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿ, ವಾಸ್ತವ್ಯದ ಬಗ್ಗೆ ಪಂಚಾಯತ್‍ನಿಂದ ದೃಢೀಕರಣ ಪತ್ರ.

    ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ ವಿಟ್ಲ, ದೂರವಾಣಿ ಸಂಖ್ಯೆ 08255 238080 ಸಂಪರ್ಕಿಸುವಂತೆ ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.