ಮಂಗಳೂರು (ಸೆಪ್ಟೆಂಬರ್ 22):- ಮಂಗಳೂರು ವಿಶ್ವವಿದ್ಯಾನಿಲಯದದೈಹಿಕ ಶಿಕ್ಷಣ ವಿಭಾಗದ ಸಂಶೋಧನಾ ಲ್ಯಾಬ್‍ಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಎಂ.ಪಿ.ಎಡ್., ಪಿ.ಹೆಚ್.ಡಿ. / ಎಂ.ಪಿ.ಟಿ. (ಮಾಸ್ಟರ್‍ಆಫ್ ಫಿಸಿಯೋಥೆರಪಿ), ಪಿ.ಎಚ್.ಡಿ. / ಎಂ.ಎಸ್.ಸಿ. ಇನ್‍ಎಕ್ಸ್ರೈಸ್‍ಆ್ಯಂಡ್ ಸ್ಪೋರ್ಸ್ ಸೈನ್ಸ್ ವಿದ್ಯಾರ್ಹತೆ ಹೊಂದಿರುವ(ಕನಿಷ್ಠ 55% ಅಂಕ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 50 ಅಂಕಗಳೊಂದಿಗೆ) ಅರ್ಹ ಆಭ್ಯರ್ಥಿಗಳು ಅರ್ಜಿಯನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ www.managaloreuniversity.ac.in ನಿಂದ ಪಡೆಯಬಹುದು.

    ಭರ್ತಿ ಮಾಡಿದಅರ್ಜಿಯನ್ನು ದಾಖಲೆಗಳ (ಎಸ್.ಎಸ್.ಎಲ್.ಸಿ ಮಾಕ್ಸ್‍ಕಾರ್ಡ್, ಪಿ.ಜಿ. ಮಾಕ್ಸ್‍ಕಾರ್ಡ್, ಜಾತಿ ಪ್ರಮಾಣ ಪತ್ರ, ಸರ್ವೀಸ್ ಸರ್ಟಿಫಿಕೇಟ್, ಯು.ಜಿ.ಸಿ.,ಎನ್.ಇ.ಟಿ., ಎಸ್.ಎಲ್.ಇ.ಟಿ. ಉತ್ತೀರ್ಣತೆ, ಎಂ.ಫಿಲ್., ಪಿ.ಹೆಚ್.ಡಿ. ಪದವಿ ಪ್ರಮಾಣ ಪತ್ರ) ಜೆರಾಕ್ಸ್ ಪ್ರತಿಗಳೊಂದಿಗೆ ಸೆಪ್ಟೆಂಬರ್ 30 ರಂದು ಸಂಜೆ 5.30 ಗಂಟೆಯ ಒಳಗಾಗಿ ಕುಲಸಚಿವರಕಚೇರಿಗೆ ಸಲ್ಲಿಸಬೇಕು.

ಅಭ್ಯರ್ಥಿಗಳು ತಮ್ಮ ಇ-ಮೇಲ್ ವಿಳಾಸ ಮತ್ತುದೂರವಾಣಿ ಸಂಖ್ಯೆಅಥವಾ ಮೊಬೈಲ್ ಸಂಖ್ಯೆಯನ್ನುಅರ್ಜಿಯಲ್ಲಿಕಡ್ಡಾಯವಾಗಿ ನಮೂದಿಸಬೇಕು.ಆನ್‍ಲೈನ್ ಸಂದರ್ಶನದ ದಿನಾಂಕವನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ www.managaloreuniversity.ac.in  ಪ್ರಕಟಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕುಲಸಚಿವರಕಚೇರಿ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ, ದೂರವಾಣಿ ಸಂಖ್ಯೆ 0824-2287276, 0824-2287424 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.