ಮಂಗಳೂರು : ಮಂಗಳೂರಿನ ಸರಕಾರಿ ಆಸ್ಪತ್ರೆಯಾದ ವೆನ್ನಾಕ್‌ನಲ್ಲಿ ಹಲವಾರು ವರ್ಷಗಳಿಂದ ಬಡ ರೋತೋರಿಸುತ್ತಿದ್ದು ಅದಕ್ಕೆ ಪೂರಕವಾಗಿ ಕಳೆದ ಎರಡು ದಿನಗಳ ಹಿಂದೆ ಬೈಕ್ ಅಪಘಾತವೊಂದು ನಡೆದಿದ್ದು, ಗಾಯಾಳುವನ್ನು ಸಂಗಡವಿದ್ದ ಸ್ನೇಹಿತರುಗಳು ತಕ್ಷಣ ವೆಸ್ಲಾಕ್ ಗಿಗಳಿಗೆ ಚಿಕಿತ್ಸೆಯ ವಿಚಾರದಲ್ಲಿ ವೈದ್ಯರುಗಳು ಹಾಗೂ ಸಿಬ್ಬಂದಿಗಳು ನಿರ್ಲಕ್ಷ್ಯ ಆಸ್ಪತ್ರೆಗೆ ಕರೆತಂದಿದ್ದು, ಆ ಸಂದರ್ಭದಲ್ಲಿ ಗಾಯಾಳುವಿನ ಬಗ್ಗೆ ಯಾವುದೇ ವೈದ್ಯರಾಗಲೀ ಅಥವಾ ಸಿಬ್ಬಂದಿಗಳಾಗಲಿ ನಿಗಾ ವಹಿಸದೆ ಇರುವುದು ಅತ್ಯಂತ ನೋವಿನ ಸಂಗತಿ. 

ಈ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಸಾಮಾಜಿಕ ಜಾಲತಾಣದ ಮೂಲಕ ಅನ್ಯಾಯದ ವಿರುದ್ಧ ಜನರಿಗೆ ತಿಳಿಯುವಂತೆ ಅಲ್ಲಿನ ಮಾಹಿತಿಗಳನ್ನು ರವಾನಿಸಿದ ಬಗ್ಗೆ ನಮ್ಮ ಸಂಘಟನೆಯ ಇಬ್ಬರು ಕಾರ್ಯಕರ್ತರನ್ನು ಜೈಲಿಗೆ ತಳ್ಳಿದ್ದು ಸರಿಯಲ್ಲ ಎಂಬುದು ಸಂಘಟನೆಯ ಅಭಿಪ್ರಾಯವಾಗಿದೆ. 

ಒಬ್ಬ ಜವಾಬ್ದಾರಿ ಕಾರ್ಯಕರ್ತನಾಗಿ ರೋಗಿಗಳಿಗೆ ತಕ್ಷಣಕ್ಕೆ ಸಿಗಬೇಕಾದ ಸವಲತ್ತುಗಳನ್ನು ವಂಚಿಸುತ್ತಿದ್ದ ಬಗ್ಗೆ ಸಾಮಾನ್ಯ ಜನರಿಗೆ ತಿಳಿಯಪಡಿಸುವುದು ನಾಗರಿಕರ ಕರ್ತವ್ಯ ಎಂಬುದು ನಮ್ಮ ಭಾವನೆ. ಇಂತಹ ಸನ್ನಿವೇಶಗಳಿಂದ ಹಲವಾರು ಅಮಾಯಕರು ಪ್ರಾಣವನ್ನು ತೆತ್ತಿದ್ದಾರೆ. ಈಗಾಗಲೇ ವೆಸ್ಲಾಕ್‌ನ ವೈದ್ಯಾಧಿಕಾರಿ (RMO) ಡಾ| ರಾಜೇಶ್ವರಿಯ ಬಗ್ಗೆ ಅಪಸ್ವರವಿದ್ದು, ಹಲವಾರು ಸಾಮಾಜಿಕ ಸಂಘಟನೆಗಳು ಇವರ ವಿರುದ್ಧ ಧ್ವನಿ ಎತ್ತಿರುವುದು ಕಂಡು ಬರುತ್ತಿದೆ. ಈ ಕೂಡಲೇ ಅವರನ್ನು ಅಮಾನತುಗೊಳಿಸಬೇಕು ತಕ್ಷಣದಿಂದ ಬಡವರಿಗೆ ಸಿಗುವ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗದೇ ಸೂಕ್ತ ಆರೋಗ್ಯ ಸಂಬಂಧ ಸವಲತ್ತುಗಳನ್ನು ಒದಗಿಸಿ ಕೊಡುವಲ್ಲಿ ಕ್ರಮ ಜರುಗಿಸಿ ಸಮಸ್ಯೆಗೆ ಸೂಕ್ಕೆ ಪರಿಹಾರವನ್ನು ಒದಗಿಸಿ ಕೊಡಬೇಕಾಗಿ ತಮ್ಮಲಿ ಕಳಕಳಿಯಿಂದ ವಿನಂತಿ ಮಾಡುತ್ತಿದ್ದೇವೆ.

ಆನಂದ್ ಶೆಟ್ಟಿ ಅಡ್ಯಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳು