ಮಂಗಳೂರು: ಕೋವಿಡ್ -19 ನ ಹಾವಳಿಯಲ್ಲಿ ಸಂಪೂರ್ಣ ದುಡಿಯುವ ವರ್ಗ ಕೆಲಸವಿಲ್ಲದೆ ಅವರ ಜೀವನದುಸ್ತರವಾಗಿದೆ. ಅದರಲ್ಲಿಯೂ ಚಿನ್ನ-ಬೆಳ್ಳಿ, ಮರ, ಕಬ್ಬಿಣದ ಕೆಲಸಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ವಿಶ್ವ ಕರ್ಮ ಸಹಕಾರ ಬ್ಯಾಂಕ್‍ ಅವರ ಹಿತ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ.  ಸರಕಾರದ ಪ್ಯಾಕೇಜ್‍ನ ನಿರೀಕ್ಷೆಯಲ್ಲಿದ್ದ ಚಿನ್ನ ಬೆಳ್ಳಿ, ಮರ, ಕಬ್ಬಿಣದ ಕೆಲಸಗಾರರಿಗೆ ಬಡ್ದಿರಹಿತವಾಗಿ ರೂ.10,000/- ದವರೆಗೆ ವಿಶ್ವಕರ್ಮ ಬ್ಯಾಂಕ್ ಸಾಲ ನೀಡುವ ಮೂಲಕ ಅವರ ನೆರವಿಗೆ ಬಂದಿದೆ.

          ಈ ಮೂಲಕ ಸರಕಾರ ಜವಾಬ್ದಾರಿಯುತವಾಗಿ ಮಾಡುವ ಕೆಲಸವನ್ನುಒಂದು ಸಹಕಾರ ಬ್ಯಾಂಕ್ ಮಾಡಿರುವುದು ಅಭಿನಂದನೀಯ ಎಂದು ದ.ಕ.ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷರಾದ ಕೆ.ಎಲ್.ಹರೀಶ್ ಹೇಳಿದರು.  ವಿಶ್ವಕರ್ಮ ಬ್ಯಾಂಕ್‍ ತನ್ನ ಸದಸ್ಯರಿಗೆ ನೀಡಿರುವ ಕೋವಿಡ್ -19 ಚೈತನ್ಯ  ಸಾಲ ಯೋಜನೆಯ ಫಲಾನುಭವಿಗಳಿಗೆ ಸಾಲದ ಮಂಜೂರಾತಿ ಪತ್ರವನ್ನು ವಿತರಿಸುವ ಸಂದರ್ಭದಲ್ಲಿ ಅವರು ಈ ಬಗ್ಗೆ ಮಾತನಾಡಿದರು.  

           ಬ್ಯಾಂಕಿನ ಅಧ್ಯಕ್ಷರಾದ ಹರೀಶ್‍ ಆಚಾರ್‍ರವರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮಂಜೂರಾತಿ ಪತ್ರಗಳನ್ನು ವಿತರಿಸಿದರು. ಬ್ಯಾಂಕಿನ ಉಪಾಧ್ಯಕ್ಷರಾದ ಡಿ.ಭಾಸ್ಕರ ಆಚಾರ್ಯ, ದ.ಕ.ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಕಾರ್ಯದರ್ಶಿ ಪ್ರಕಾಶ್ ಹೆಚ್., ಬ್ಯಾಂಕಿನ ನಿರ್ದೇಶಕರುಗಳಾದ ಪಿ. ಜಗದೀಶ್ ಆಚಾರ್ಯ, ಎಸ್. ಜಯಶ್ರೀ. ವಿ. ಆಚಾರ್, ಜಗದೀಶ್‍ ಜೆ. , ಜಯಪ್ರಕಾಶ್, ರೇಷ್ಮಾ, ಶರತ್ ಕೆ. ಆಚಾರ್ಯ, ಹರಿಪ್ರಸಾದ್, ರಾಜೇಶ್ ಹಾಗೂ ಪ್ರಧಾನ ವ್ಯವಸ್ಥಾಪಕರು ಉಪಸ್ಥಿತರಿದ್ದರು.