ಮಂಗಳೂರು (ಸೆಪ್ಟೆಂಬರ್ 28):- ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರಿಗೆ ಸಂಬಂಧಪಟ್ಟಂತೆ ಪಿಂಚಣಿ/ ಕುಟುಂಬ ಪಿಂಚಣಿಯ ಕುರಿತು ಯಾವುದೇ ಸಮಸ್ಯೆಗಳಿದ್ದಲ್ಲಿ ಪ್ರಸಕ್ತ ಸಾಲಿನ ಡಿಸೆಂಬರ್ ತಿಂಗಳಿನಲ್ಲಿ ಪಿಸಿಡಿಎ ಅಲಹಾಬಾದ್‍ನವರು ಆಯೋಜಿಸುತ್ತಿರುವ ಪಿಂಚಣಿ ಅದಾಲತ್‍ಗಾಗಿ ಮನವಿ ಸಲ್ಲಿಸಲು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಇಲ್ಲಿಂದ ಪಡೆಯಬಹುದು ಎಂದು ಮಂಗಳೂರು ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆ, ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.