ಮಂಗಳೂರು,(ಜನವರಿ 29):- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದ.ಕ ಜಿಲ್ಲೆಯಲ್ಲಿ ಪೌಷ್ಠಿಕ ತೋಟ ನಿರ್ಮಿಸಲು ವಿವಿಧ ಜಾತಿಯ ತೋಟಗಾರಿಕೆ ಸಸಿಗಳನ್ನು ಸರಬರಾಜು ಮಾಡಲು ಅರ್ಹ ಖಾಸಗಿ ನರ್ಸರಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ 10 ಕೊನೆಯ ದಿನ.
ಸರಬರಾಜು ಮಾಡಲು ಸಿದ್ದರಿರುವ ಹಾಗೂ ಉತ್ತಮ ಗುಣಮಟ್ಟದ ಸಸಿ/ಕಸಿ ಗಿಡಗಳ ಸಾಕಷ್ಟು ದಾಸ್ತಾನು ಹೊಂದಿರುವ ಖಾಸಗಿ ನರ್ಸರಿಗಳು ನುಗ್ಗೆ, ನಿಂಬೆ, ಕರಿಬೇವು, ಪಪ್ಪಾಯ, ಸೀಬೆ, ಮಾವು(ಕಸಿ), ಸೀತಾಫಲ, ಸಪೋಟ, ಅಂಗಾಂಶ ಬಾಳೆ, ನೆಲ್ಲಿ, ತೆಂಗು (ಗಿಡ್ಡ) ಹಾಗೂ ತೆಂಗು (ಉದ್ದ) ಸಸಿಗಳನ್ನು ಇಲಾಖೆಯು ನಿಗದಿ ಪಡಿಸಿರುವ ದರಗಳನ್ವಯ ಸರಬರಾಜು ಮಾಡಬೇಕು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2423628, ಅಥವಾ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿ, ಬೆಂದೂರು ಕ್ರಾಸ್, ಮಂಗಳೂರು ಇವರನ್ನು ಸಂಪರ್ಕಿಸಲು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.