ಮಂಗಳೂರು: ನಗರದ ಸೈಂಟ್‍ ಅಗ್ನೇಸ್ ಪದವಿ ಪೂರ್ವಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿ, ಕಾಲೇಜು ಶೇ 97.5% ರಷ್ಟು ಫಲಿತಾಂಶ ದಾಖಲಿಸಿಕೊಂಡಿದೆ. 

ವಿಜ್ಞಾನ ವಿಭಾಗದಲ್ಲಿ ಕು. ರಿಯಾಜೀಶಲ್ ಪಿಂಟೊ ಶೇ 97.2ರಷ್ಟು, ವಾಣಿಜ್ಯ ವಿಭಾಗದಲ್ಲಿ ಕು. ಮಿಶಾಲ್ ಲೆನಿಟಾ ಡಿಸೋಜಾ ಶೇ 98.2, ಮಾನವಿಕ ವಿಭಾಗದಲ್ಲಿ ಕು. ವಿಧುಲ ಕೊಡಿರ ಲೋಕೇಶ್‍ ಶೇ 96.5ರಷ್ಟು ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನೀಯರಾಗಿರುತ್ತಾರೆ. 

61 ರಷ್ಟು ವಿದ್ಯಾರ್ಥಿನಿಯರು ಕೆಲವು ವಿಷಯಗಳಲ್ಲಿ 100 ಕ್ಕೆ 100 ರಷ್ಟು ಅಂಕಗಳನ್ನು ಪಡೆದಿದ್ದರೆ, 195 ರಷ್ಟು ವಿದ್ಯಾರ್ಥಿನಿಯರು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.