ಮಂಗಳೂರು : ಮಹಾತ್ಮಾ ಗಾಂಧಿಜಿಯವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಅಕ್ಟೋಬರ್ 2ರಂದು ದೇಶಾದ್ಯಾಂತ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ವತಿಯಿಂದ ಏಲ್ಲಾ ಜಿಲ್ಲಾ ಕೇಂದ್ರಗಳು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಸ್ವತಂತ್ರ ಭಾರತದ ಕನಸು ಹಾಗೂ ರಾಮರಾಜ್ಯದ ಕುರಿತು ಜಾಥವಾಗಿ ಆಚರಿಸಲಾಗುತಿದ್ದು ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದವತಿಯಿಂದ ಅಕ್ಟೋಬರ್ 2ರಂದು ಮಂಗಳೂರಿನ ಕರಾವಳಿ ಮೈದಾನದಿಂದ  ಪುರಭವನದವರೆಗೆ ಮೆರವಣಿಗೆ ನಢೆಯಲಿದ್ದು ಮಧ್ಯಾಹ್ನ 3 ಗಂಟೆಗೆ ಆರಂಭಗೊಂಡು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಇರುವ ಗಾಂಧೀ ಪ್ರತಿಮೆಗೆ ಮಾಲರ್ಪಣೆ ಮಾಡಿ ಮಹಾತ್ಮ ಗಾಂಧೀ ರಸ್ತೆ ಪಿ.ವಿ.ಎಸ್, ಬಂಟ್ಸ್‍ಹಾಸ್ಟೆಲ್, ಹಂಪನ್‍ಕಟ್ಟೆಯಾಗಿ ಪುರಭವನ ಸೇರಲಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪಕ್ಷದ ಮುಖಂಡರು ಶ್ವೇತ ವಸ್ತ್ರಧಾರಿಯಾಗಿ ಚರಕದ ಬಾವುಟವನ್ನು ಶಿಸ್ತು ಬಧ್ಧವಾದ ಈ ಮೆರವಣಿಗೆ ಸಾಗಲಿದೆ. ನಂತರ ಪುರಭವನದಲ್ಲಿ ಗಾಂಧಿಜಿಯವರ ಜೀವನ ಚರಿತ್ರೆ, ಸಾಕ್ಷ್ಶಾ ಚಿತ್ರ ಮತ್ತು ಉಪನ್ಯಾಸ ಹಾಗೂ ಪ್ರಸ್ತುತ ರಾಜಕೀಯದಲ್ಲಿ ಆಗುವಂತಹ ಆಗು-ಹೋಗುಗಳಿಗೆ ಗಾಂಧೀಜಿಯವರ ಚಿಂತನೆಗಳು ಇದರ ಬಗ್ಗೆ ತಿಳುವಳಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯ್ಷಕ ಹರೀಶ್ ಕುಮಾರ್ ತಿಳಿಸಿದ್ದಾರೆ. ಈ ಪತ್ರಿಕಾ ಗೊಷ್ಠಿಯಲ್ಲಿ ವಿಧಾನ ಪರಿಷತ್‍ನ ಸದಸ್ಯರಾದ ಐವನ್ ಡಿಸೋಜ, ಮಾಜಿ ಶಾಸಕ ಮೊಯಿದಿನ್ ಬಾವಾ, ಕಾರ್ಪೊರೇಟರ್ ನವೀನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.