ಮಂಜೊಟ್ಟಿ: “ಕೃಷಿತೋ ನಾಸ್ತಿ ದುರ್ಭಿಕ್ಷ”ಪ್ರಕೃತಿಯುದೇವರು ಮನುಕುಲಕ್ಕೆ ಕೊಟ್ಟ ವಿಶೇಷ, ವಿಶಿಷ್ಠ ಕೊಡುಗೆಯಾಗಿದೆ. ಈ ಪ್ರಕೃತಿಯನ್ನು ಸಾವಿರಾರು ಜೀವಿಗಳು ಅವಲಂಬಿಸಿ ಬದುಕುತ್ತವೆ. ಅದರಲ್ಲೂ ಮುಖ್ಯವಾಗಿ ಮನುಷ್ಯ ಪ್ರಕೃತಿಯಅಧಿಪತಿಯಾಗಿದ್ದಾನೆ. ನಮ್ಮ ಸುತ್ತ ಮುತ್ತ ಕಂಗೊಳಿಸುವ ಪ್ರಕೃತಿಯ ಸೊಬಗು ಮನುಷ್ಯನ ಕಣ್ಮನಗಳನ್ನು ತಣಿಸುವುದರಜೊತೆಗೆತಿನ್ನುವಆಹಾರಕ್ಕೆ ಪೂರಕವಾಗಿ ಬೇಕಾಗುವ ಎಲ್ಲಾರೀತಿಯ ದವಸ-ಧಾನ್ಯಗಳನ್ನು, ಅಕ್ಕಿ-ಪದಾರ್ಥಗಳನ್ನು ಪ್ರಕೃತಿಯಿಂದಲೇ ಬೆಳೆದು ಹೊಟ್ಟೆತುಂಬಿಸುತ್ತಾನೆ. ದಿನನಿತ್ಯದ ಬದುಕಿನಲ್ಲಿ ಪ್ರಕೃತಿಯುಕೊಡುವ ಸುಖ ಸಂತೋಷಗಳನ್ನು ಆಸ್ವಾದಿಸಿ ಅದರರಕ್ಷಣೆಯನ್ನು ಮಾಡುವಜವಾಬ್ದಾರಿಯು ಪ್ರತಿಯೊಬ್ಬನದ್ದಾಗಿದೆ. ನಮ್ಮ ಹಿರಿಯರುಗದ್ದೆ ಬೇಸಾಯಕ್ಕಾಗಿಕಷ್ಟಪಟ್ಟುದುಡಿದು ಭತ್ತವನ್ನು ಬೆಳೆದು ಊಟ ಮಾಡುತ್ತಿದ್ದರು.ಕೈಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತನ್ನು ನಮ್ಮ ಹಿರಿಯರುಅಕ್ಷರಶ: ಪಾಲಿಸುತ್ತಿದ್ದರು. ಇಂದು ಬೇಸಾಯ ಮಾಡುವವರಿಲ್ಲದೆ ಗದ್ದೆಗಳು ಹಡೀಲು ಬಿದ್ದಿದೆ.ಇಂದಿನ ವೈಜ್ಞಾನಿಕಯುಗದಲ್ಲಿಯುವಜನರು ವ್ಯವಹಾರಿಕ ಚಿಂತನೆಗೊಳಗಾಗಿ ಪ್ರಕೃತಿಯನ್ನು ಅವಲಂಬಿಸಿ ಬದುಕುವ ಬದಲು ಪ್ರಕೃತಿಯ ನಾಶಕ್ಕೆ ಮುಂದಾಗುವುದು ಗಮನಿಸಬಹುದಾಗಿದೆ.ಆಧುನಿಕ ಪ್ರಗತಿಯಚಿಂತನೆಯ ಭರದಲ್ಲಿಪ್ರಕೃತಿಯಲ್ಲಿಕಲುಷಿತ ವಾತಾವರಣತುಂಬಿದೆ.ಇದಕ್ಕಾಗಿಚಿಂತನ ಮಂಥನ ನಡೆಸದೇ ಹೋದರೆ ನಾವು ನಂಬಿಕೊಂಡು ಬದುಕುವ ಪ್ರಕೃತಿಯೇ ನಮ್ಮನ್ನು ನಾಶ ಮಾಡುವಎಲ್ಲಾ ಸೂಚನೆಗಳನ್ನು ಪ್ರದೇಶವಾರುಎದುರಿಸಬೇಕಾಗುತ್ತದೆ.
2019ನೇ ವರ್ಷದಲ್ಲಿಇದರತೀವ್ರತೆಯನ್ನುಅರಿತಕಥೋಲಿಕ್ ಪವಿತ್ರಧರ್ಮಸಭೆಯ ಮಂಗಳೂರು ಧರ್ಮಪ್ರಾಂತ್ಯದಅತೀ ವಂದನೀಯ ಬಿಷಪರಾದಡಾ| ಪೀಟರ್ ಪೌಲ್ ಸಲ್ಡಾನರವರು‘ಲಾವ್ದಾತೊ ಸಿ’ಯೋಜನೆಯ ಮುಖಾಂತರಗಿಡ ನೆಟ್ಟುಕಾಡು ಬೆಳೆಸುವ, ಗದ್ದೆಗಳಲ್ಲಿ ಬೇಸಾಯ ಮಾಡುವ ಹಸಿರು ಕ್ರಾಂತಿಯೋಜನೆಯನ್ನುಚರ್ಚ್ ವ್ಯಾಪ್ತಿಯ ಪ್ರತಿಯೊಬ್ಬರುಕೈಗೊಳ್ಳುವಂತೆಕರೆ ನೀಡಿದರು. ಅದರಂತೆ ಬೆಳ್ತಂಗಡಿ ತಾಲೂಕಿನಮಂಜೊಟ್ಟಿಯಲ್ಲಿರುವ ಪವಿತ್ರ ಶಿಲುಬೆಗೆ ಸಮರ್ಪಿಸಿದ ಚರ್ಚ್ ವ್ಯಾಪ್ತಿಯಲ್ಲಿ ಹಡೀಲು ಬಿದ್ದಿರುವಗದ್ದೆಯಲ್ಲಿ ಬೇಸಾಯ ಮಾಡಲುತೀರ್ಮಾನಿಸಲಾಯಿತು.ಈ ಮೂಲಕ ಬೆಳೆದ ಬೆಳೆಯಿಂದ ಧರ್ಮಪ್ರಚಾರಕಾರ್ಯಕ್ಕೆ ಈ ಹಣವನ್ನು ವಿನಿಯೋಗಿಸುವಗುರಿಯಿಟ್ಟು ಈ ವಿಶಿಷ್ಠ ಕಾರ್ಯವನ್ನು ಕೈಗೊಳ್ಳಲಾಯಿತು.ಚರ್ಚ್ ಪಾಲನಾ ಪರಿಷತ್ತಿನ ಈ ನಿರ್ಧಾರದಂತೆಯುವಜನರುಚರ್ಚ್ ವ್ಯಾಪ್ತಿಯ ವಿವಿಧ ಕುಟುಂಬಗಳಲ್ಲಿ ಹಡೀಲು ಬಿದ್ದಿರುವ 7 ಮುಡಿಗದ್ದೆ ವ್ಯಾಪ್ತಿಯ ಸ್ಥಳವನ್ನು ಸ್ವಚ್ಛಗೊಳಿಸಿ, ಸಮತಟ್ಟು ಮಾಡಿ, ನೇಜಿ ನೆಟ್ಟು, ಗೊಬ್ಬರ ಹಾಕಿ, ಭತ್ತಕೊಯ್ದು ಸುಮಾರು 57 ಕ್ವಿಂಟಾಲ್ ಭತ್ತವನ್ನು ಪಡೆದು 38 ಕ್ವಿಂಟಾಲ್‍ಅಕ್ಕಿಯನ್ನು ಸಂಪಾದಿಸಿರುತ್ತಾರೆ.ಇದರಲ್ಲಿ 2 ಕ್ವಿಂಟಾಲ್‍ಅಕ್ಕಿಯನ್ನು ಬಡವರಿಗೆ ಹಂಚಿ, ಉಳಿದ ಅಕ್ಕಿ ಮತ್ತು ಹುಲ್ಲನ್ನು ಮಾರಿಖರ್ಚನ್ನುತೆಗೆದು ಸುಮಾರು 1 ಲಕ್ಷದ 20 ಸಾವಿರ ಹಣವನ್ನು ಸಂಗ್ರಹಿಸಿದ್ದು, ಈ ಹÀಣವನ್ನು ದೀನ ದಲಿತರ ಸೇವಾ ಕಾರ್ಯಕ್ಕೆ ಮಂಜೊಟ್ಟಿಚರ್ಚ್‍ನಕೊಡುಗೆಯನ್ನಾಗಿ ನೀಡಲು ಸಾಧ್ಯವಾಗಿದೆ.ಅಲ್ಲದೆಇತರಖರ್ಚು ವೆಚ್ಚಕ್ಕಾಗಿ ಹಲವಾರು ದಾನಿಗಳು ರೂ.40 ಸಾವಿರವನ್ನುದೇಣಿಗೆಯನ್ನು ನೀಡಿರುತ್ತಾರೆ.
ಮಂಜೊಟ್ಟಿಕಾಡು ಪ್ರದೇಶದಲ್ಲಿ ಈ ಸಾಧನೆ ಮಾಡುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಪ್ರಕೃತಿ ವಿಕೋಪ, ಅತಿವೃಷ್ಠಿ, ಕಾಡುಪ್ರಾಣಿಗಳ ತೊಂದರೆ, ಹಕ್ಕಿ, ಕ್ರಿಮಿ ಕೀಟಗಳ ಸಮಸ್ಯೆ..ಎದುರಾದರೂಯುವಜನರಿಗೆಇದರಅರಿವಿದ್ದು, ಮುಂಜಾಗ್ರತಾಕ್ರಮವನ್ನುಕೈಗೊಂಡೇ ಈ ಸಾಧನೆ ಮಾಡಲು ಸಾಧ್ಯವಾಯಿತು.ಈ ಮಾದರಿಯೋಜನೆಯಿಂದದುಡಿದ ಪ್ರತೀಯೋರ್ವರಲ್ಲಿ ಸಂತೃಪ್ತಿಯ ಮನೋಭಾವನೆಯನ್ನುಕಾಣಲು ಸಾಧ್ಯವಾಗಿದೆ.ಗ್ರಾಮ ಪಂಚಾಯತ್ ಮತ್ತು ಕೃಷಿ ಇಲಾಖೆಯಿಂದಲೂ ಈ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಇತರ ಕಡೆಗಳಿಂದ, ಪ್ರತ್ಯೇಕವಾಗಿ ಚರ್ಚ್‍ಗಳಿಂದ ಕೃಷಿ ಮೂಲಕ ಹಣದ ಸಂಗ್ರಹ ಸಾಧ್ಯವೆಂಬುದು ಮನದಟ್ಟಾಗಿದೆ.ಹೀಗೆ ಚರ್ಚ್‍ನ 88 ಕುಟುಂಬಸ್ಥರಉತ್ತಮ ಮನೋಭಾವನೆ, ಒಗ್ಗಟ್ಟಿನ ಕೆಲಸ, 5 ತಿಂಗಳ ಅವಿರತ ಶ್ರಮ, ಯುವಜನರ ಪರಿಸರ ಪ್ರೇಮ, ಧರ್ಮ ಸಭೆಯದೇವತಾಕಾರ್ಯಕ್ಕೆ ಹಾಗೂ ದೀನದಲಿತರ ಸೇವಾಕಾರ್ಯಕ್ಕೆಉತ್ತಮ ಬೆಂಬಲ ದೊರೆಯಲು ಸಾಧ್ಯವಾಗಿದೆ.ಮಂಜೊಟ್ಟಿಚರ್ಚ್‍ನ ಪಾಲನಾ ಪರಿಷತ್, ಭಕ್ತಾದಿಗಳಿಗೆ, ಐ.ಸಿ.ವೈ.ಎಂ ಹಾಗೂ ಮತ್ತಿತರಎಲ್ಲಾ ಸಂಘಟನೆಗಳಿಗೂ ಹಾಗೂ ಕೃಷಿ ಬೇಸಾಯ ಮಾಡಲು ಸ್ಥಳ ನೀಡಿದಎಲ್ಲಾ ಹಿಡುವಳಿದಾರರಿಗೂ ಈ ಸಂದರ್ಭದಲ್ಲಿಚರ್ಚ್‍ಕೃತಜ್ಞತೆಯಿಂದ ಸ್ಮರಿಸುತ್ತದೆ.
ಲೇಖನ: ವಿವೇಕ್ ವಿ. ಪಾೈಸ್ ಮಡಂತ್ಯಾರು.