ಬದಲಾಯಿಸಲಿಲ್ಲ ಹಿಡಿದ ದಾರಿ

ಜರಿವ ಜನರು ನೋಡಿದ ಹಾಗೆ

ಹೊಡೆದ ಪೆಟ್ಟು ಬಲವಾದ ಕಾರಣ


ದಾರಿಮಾತ್ರವಲ್ಲ ಇಟ್ಟ ಗುರಿ

ತೊಟ್ಟ ಕನಸು ವ್ಯಕ್ತಿ ನಿಷ್ಠೆ ಎಲ್ಲವೂ

ಬದಲಾಯಿತು ಕಾರಣ ಈ ಹಾಳು ಹಣ


ಕಡಲ ತುದಿಯ ಹುಡುಕಲೊರಟ

ಅಂಬರದಗಲ ಅಳೆಯಲೊರಟ

ನಿನ್ನದೊಂದಂದದ ಹಗರಣ


ಮರುಳು ಮಾಡಿ ಕೊರಳು ನೀಡಿ

ಚಿನ್ನದರಳ ಉರುಳಿಗೆ ಮನಸೋತರೆ

ಮುಂದಾಗುವುದು ರೋಚಕ ಮರಣ


- By ಮಾಗಿದ ಮನಸ್ಸು