ಮಂಗಳೂರು : ಮಿಲಾಗ್ರಿಸ್ ಕಾಲೇಜಿನಲ್ಲಿ ವಿವಿಧ ವೃತ್ತಿಪರ ಕೋರ್ಸ್‍ಗಳಾದ ಎವಿಯೇಶನ್, ಹೋಸ್ ಪಿಟಾಲಿಟಿ, ಪ್ರಯಾಣ ಮತ್ತು ಪ್ರವಾಸ, ಎಸಿಸಿಯೆ, ಮ್ಯಕ್ಸೋಲೋಜಿ ಮತ್ತು ಪ್ಲೆರಿಂಗ್ ವಿವಿಧ ವೃತ್ತಿಪರ ಕೋರ್ಸ್ ಮತ್ತು ಹೋನೆಸ್ಟಿ ಕೌಂಟರ್ ಎಂಬ ಲೇಖನ ಸಾಮಾಗ್ರಿಗಳ ವಿಭಾಗವನ್ನು ಸಾಕೇತಿಕವಾಗಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿಗಳಾದ ಎಸ್. ಐ. ಧರ್ಮೆಗೌಡ ಇವರು ಮಾತನಾಡಿ ಈ ಹೊಸ ವಿವಿಧ ವೃತ್ತಿಪರ ಕೋರ್ಸ್‍ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುದರ ಜೊತೆಗೆ ದೇಶ ವಿದೇಶಗಳಿಗೆ ಇಂತಹ ಕೋರ್ಸ್‍ಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಮಿಲಾಗ್ರಿಸ್ ವಿದ್ಯಾಸಂಸ್ಥೆಯ ಸಂಚಾಲಕರಾಗಿರುವ ವಂ. ಗುರು ಜೋಸೆಫ್ ಲೋಬೊ ಇವರು ಮಾತನಾಡಿ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‍ಗಳನ್ನು ಆಯ್ದುಕೊಳ್ಳುದರ ಜೊತೆಗೆ ಅವುಗಳನ್ನು ಸದುಉಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾಗಿರುವ ವಂ. ಗುರು  ಮೈಕಲ್ ಸಾಂತುಮಾಯೊರ್ ಇವರು ಅತಿಥಿಗಳನ್ನು ಸ್ವಾಗತಿಸುದರ ಜೊತೆಗೆ ಕಾಲೇಜಿನಲ್ಲಿ ವಿನೂತನವಾಗಿ ಆರಂಬಿಸಲಾದ ಹೋನೆಸ್ಟಿ ಕೌಂಟರ್ ಬಗ್ಗೆ ವಿವರಿಸಿ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಳ್ಳುದರ ಜೊತೆಗೆ ಜೀವನದಲ್ಲಿ ಪ್ರಮಾಣಿಕತೆಯನ್ನು ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು. ಮಿಲಾಗ್ರಿಸ್ ಚರ್ಚ್ ಪಾಲನ ಸಮಿತಿಯ ಉಪಧ್ಯಕ್ಷರಾದ  ಸಿಸಿಲಿಯಾ ಪಿರೇರಾ, ಶಿಕ್ಷಕ-ರಕ್ಷಕ ಸಮಿತಿಯ ಅಧ್ಯಕ್ಷರಾದ  ಲವಿನಾ ಲೋಬೊ, ಶೈಕ್ಷಣಿಕ ಸಲಹೆಗಾರರಾದ ಪ್ರೊ. ಲೂರ್ದುಸಾಮಿ, ವಿದ್ಯಾರ್ಥಿನಿ ಐವಿನ್ ವಿನಿಶಾ ಮೊದಲಾದವರು  ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿವಿ ಪ್ಲೋರಿಡಾ ಕಾರ್ಯಕ್ರಮವನ್ನು ನಿರೂಪಿಸಿದರು, ಈ ಕಾರ್ಯಕ್ರಮದ ಸಂಯೋಜಕರು ಹಾಗೂ ಉಪಪ್ರಾಂಶುಪಾಲರಾದ  ಕ್ಯಾಸಿನ್ ರೊಡ್ರಿಗಸ್ ವಂದರ್ನಾಪಣೆ ಗೈದರು.