(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ: ಕೊರೋನಾ ಮಹಾ ಮಾರಿಯಿಂದ ಲಾಕ್‍ಡೌನ್ ಮುಂದುವರಿಕೆ ಯಿಂದ ಮನನೊಂದ ವೈಧಿಕ, ಉಡುಪಿ ಜಿಲ್ಲೆಯ ಕಾರ್ಕಳ ಬೈಲೂರು ಎರ್ಲಪಾಡಿ ಕಾಂತರ್‍ಗೋಳಿ ಮೂಕಾಂಬಿಕ ನಿಲಯದ ಮೂಲತಃ ಕೃಷ್ಣ (ಪೂಜಾರಿ) ಶಾಂತಿ (37.) ಇಂದಿಲ್ಲಿ ಮಂಗಳವಾರ ಸಂಜೆ ಉಪನಗರದಲ್ಲಿನ ಕಾಂದಿವಲಿ ಪಶ್ಚಿಮದ ಇರಾನಿವಾಡಿ ಇಲ್ಲಿನ ದುರ್ಗಾಪರಮೇಶ್ವರಿ ಮಂದಿರದ ಹಿಂಭಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ.
ಎಂದಿನಂತೆ ಊರಿನಿಂದ ಬಂದು ಮಂದಿರದ ಧಾರ್ಮಿಕ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದು, ಕಳೆದ ಮಾರ್ಚ್ ತೃತೀಯ ವಾರದಲ್ಲಿ ಮಂದಿರದ ಪ್ರಧಾನ ಆರ್ಚಕ ರಜೆಯಲ್ಲಿ ತೆರಳಿದ್ದ ಕಾರಣ ಮೂರ್ನಾಲ್ಕು ದಿನಗಳಿಗಾಗಿ ಮುಂಬಯಿಗೆ ಆಗಮಿಸಿ ಲಾಕ್‍ಡೌನ್‍ನಿಂದ ನಾಲ್ಕುವಾರ ಉಳಿಯುವುದು ಅನಿವಾರ್ಯವಾಗಿತ್ತು. ಆದರೂ ಮಾ.14ರಂದು ಲಾಕ್‍ಡೌನ್ ತೆರವುಗೊಳ್ಳುತ್ತಿದ್ದಂತೆಯೇ ತವರೂರಿಗೆ ತೆರಳುವ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಆದರೆ ಲಾಕ್‍ಡೌನ್ ಮುಂದುವರಿದ ಪರಿಣಾಮ ನಗರದಲ್ಲೇ ಸಿಕ್ಕಾಕಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಮೃತರು ಅವಿವಾಹಿತರಾಗಿದ್ದು, ತಾಯಿ, ಇಬ್ಬರು ಸಹೋದರಿಯರು, ಓರ್ವ ಸಹೋದರ ಕಾರ್ಕಳದಲ್ಲಿದ್ದು, ಇಬ್ಬರು ಮುಂಬಯಿನ ಶಿವ್ಡಿ ಮತ್ತು ಘಾಟ್ಕೋಪರ್‍ನಲ್ಲಿದ್ದಾರೆ. ಮೃತದೇಹವನ್ನು ಸ್ಥಾನೀಯ ಶತಾಬ್ಧಿ ಆಸ್ಪತ್ರೆಯ ಶವಗಾರದಲ್ಲಿರಿಸಿದ್ದು ಬುಧವಾರ ಮರಣೋತ್ತರ ಪರೀಕ್ಷೆಯ ನಂತರ ಮುಂಬಯಿನಲ್ಲೇ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧಾರಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಬಿಲ್ಲವ ಧುರೀಣ, ಭಾರತ್ ಬ್ಯಾಂಕ್‍ನ ನಿರ್ದೇಶಕ ಗಂಗಾಧರ್ ಜೆ.ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾಂದಿವಿಲಿ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಯೋಗೇಶ್ ಕೆ.ಹೆಜ್ಮಾಡಿ, ಗೌರವ ಕಾರ್ಯದರ್ಶಿ ಉಮೇಶ್ ಎನ್.ಸುರತ್ಕಲ್, ಧನಂಜಯ ಎಸ್.ಶಾಂತಿ, ರವೀಂದ್ರ ಎ.ಶಾಂತಿ ಮತ್ತಿತರ ಸಹಯೋಗದಲ್ಲಿ ಮೃತರ ಅಂತ್ಯಕ್ರಿಯೆ ನಡೆಸುವ ಪ್ರಕ್ರಿಯೆ ನಡೆಯುತ್ತಿದೆ.