ಕಾಪು : ಪೊಲಿಪು ಗ್ರಾಮದ ಕಾಂಗ್ರೆಸ್ ನ ಹಿರಿಯ ಮುಖಂಡ ದಿ. ನಾರಾಯಣ ಕರ್ಕೇರ ಅವರ ಪತ್ನಿ ನಿವೃತ್ತ ಶಿಕ್ಷಕಿ ವೇದಾವತಿ ನಾರಾಯಣ ಕರ್ಕೇರ (87) ಎ. 13ರಂದು ಪೊಲಿಪು ಸ್ವಗೃಹದಲ್ಲಿ ವಿಧಿವಶರಾದರು. ಮೃತರು ಪೊಲಿಪು ಸರಕಾರಿ ಶಾಲೆಯಲ್ಲಿ ನಾಲ್ಕು ದಶಕಗಳಿಗೂ ಮಿಕ್ಕಿ ಸೇವೆ ಸಲ್ಲಿಸಿದ್ದು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಮೃತರು ಮಕ್ಕಳಾದ ಮುಂಬಯಿ ನ್ಯೂಸ್ ನ ಸಂಪಾದಕ ಹೇಮರಾಜ್ ಕರ್ಕೇರ, ಉಪ ಸಂಪಾದಕ ವಾಣಿ ಪ್ರಸಾದ್ ಕರ್ಕೇರ,  ಸ್ಥಳೀಯ ಪರಿಸರದಲ್ಲಿ ರಾಜಕೀಯ ಯುವ ನಾಯಕರುಗಳಾದ ಲವ ಮತ್ತು ಕುಶ ಮತ್ತು ಅಪಾರ ಸಂಮಂಧಿಕರನ್ನು ಅಗಲಿದ್ದಾರೆ.

ಯು.ಎ.ಇ. ಯ ಖ್ಯಾತ ಉದ್ಯಮಿ ಬಿ. ಆರ್. ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ ಯವರಂತಹ ಅನೇಕ ಇವರ ಶಿಕ್ಷಕಿಯಾಗಿದ್ದರು. ಆಸ್ಕರ್ ಫೆರ್ನಾಂಡೀಸ್, ರಘುಪತಿ ಭಟ್, ಬಿ. ಆರ್. ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಸಂಸದ ನವೀನ್ ಕುಮಾರ್ ಕಟೀಲ್, ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಶೆಟ್ಟಿ, ಬಿಲ್ಲವರ ಅಶೋಷಿಯೇಶನಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಜಾಗತಿಕ ಬಂಟದ ಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಮುಂಬೈ ನ್ಯೂಸ್ ನ ನಿರ್ದೇಶಕ ಕುಮಾರ್ ಬಂಗೇರ, ನವೀನ್ ಚಂದ್ರ ಡಿ. ರ್ಣ, ವೇದವ್ಯಾಸ್ ಕಾಮತ್, ಕಾಪು ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್, ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಸಭಾಪತಿ, ನಾಡೋಜ ಡಾ. ಜಿ. ಶಂಕರ್, ಸುರೇಶ್ ಕಾಂಚನ್ ಮುಂಬಯಿ, ಗೋಪಾಲ ಪುತ್ರನ್ ಮುಂಬಯಿ, ಖ್ಯಾತ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಜನತಾದಳದ ಹಿರಿಯ ಧುರೀಣ ಯೋಗೇಶ್ ವಿ. ಶೆಟ್ಟಿ ಕಾಪು, ಮುಂಬಯಿಯ ಪತ್ರಕರ್ತರಾದ ದಿನೇಶ್ ಕುಲಾಲ್, ಈಶ್ವರ ಎಂ. ಐಲ್, ಪೊಲಿಪು ಶಾಲಾ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಸಂತಾಪ ಸೂಚಿಸಿದ್ದಾರೆ.