ಮೂಡುಬಿದಿರೆ:- ವಿಶ್ವ ಪರಂಪರೆಯ ಪವಿತ್ರ ತಾಣ ಗಳಲ್ಲಿ ಒಂದಾದ ಜೈನ ಕಾಶಿ ಮೂಡುಬಿದಿರೆಯ ಮಕುಟ ಪ್ರಾಯ ಸಾವಿರ ಕಂಬದ ಬಸದಿ ಗೆ ವಿಶಿಷ್ಟ ಸ್ಥಾನ. ಭಾರತ ದೇಶದ ಅತ್ಯಂತ ಸೂಕ್ಷ್ಮ ಕೆತ್ತನೆ ತೀರ್ಥoಕರ ಜಿನ ಬಿಂಬ ಸರ್ವ ಧರ್ಮ ಸಮನ್ವಯ ದ ಅನೇಕ ಕಲ್ಲಿನ ಚಿತ್ತಾರ ಗಳ ಬೆಡಗಿನ ಬಿತ್ತಿ ಚಿತ್ರ ಗಳುಳ್ಳ ವಾಸ್ತು ವೈಭವ ದ ಬಸದಿಗಳ ಪಟ್ಟಿಯಲ್ಲಿ ಸಾವಿರ ಕಂಬದ ಬಸದಿಗೆ ಮೂರನೇ ಸ್ಥಾನ. ಮೊದಲ ಸ್ಥಾನ ರಾಜಸ್ಥಾನ್ ರಣಾಕ್ ಪುರ್ ಬಸದಿಗೆ ಅದರ ಶಿಲ್ಪಾ ಕಲೆಗೆ ವಿಶಿಷ್ಟ ಸ್ಥಾನ ಗುರುತಿಸಲಾಗಿದೆ ಈ ವಿಚಾರ ದೆಹಲಿ ಜೈನ ಸನ್ಸ್ ಉದ್ಯಮಿ ಅರುಣ್ ಜೈನ್ ಮೂಡುಬಿದಿರೆ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಗಲವರಿಗೆ ತಿಳಿಸಿದರು.
ಸ್ವಾಮೀಜಿಯವರು ಸಂತೋಷ ವ್ಯೆಕ್ತ ಪಡಿಸುತ್ತ "ಪ್ರತಿವರ್ಷ ವಿಶ್ವ ದಾಧ್ಯಂತ ಶಾಂತಿ ಪ್ರಿಯರು ಕಲಾ ಪ್ರಿಯರು ನಮ್ಮ ಬಸದಿಗೆ ಸಾವಿರಾರು ಜನ ಭೇಟಿ ನೀಡಿ ಸಂತಸ ಪಡುತ್ತಾರೆ, ಆದರೆ ಈ ವರ್ಷ ಕೊರೋನಾದಿoದ ಬಸದಿ ಯಾತ್ರಿಕರಿಲ್ಲ ದೆ ಸೊರಗಿದೆ. ಈ ಬಸದಿಗೆ ಹೊಸ ಬೆಟ್ಟು ಗ್ರಾಮದಲ್ಲಿ ಸಾವಿರ ಮುಡಿ ಗೇಣಿ ಜೈನ ಮಠಕ್ಕೆ ಬರುತಿತ್ತು ಇಂದು ಅದು ನಿಂತು ಹೋಗಿದೆ. ಆದರೆ ಜೈನ ಮಠದಿಂದ ನಿತ್ಯ ತ್ರಿಕಾಲ ಪೂಜೆಯ ವ್ಯೆವಸ್ಥೆ ಮಾಡಲಾಗುತ್ತಿದೆ ಪುಜೆ ಸಂದರ್ಭದಲ್ಲಿ ಮಾತ್ರ ಬಸದಿ ತೆರೆದಿಡಲಾಗುತ್ತದೆ.
ಸಾರ್ವಜನಿಕರಿಗೆ ದರ್ಶನಕ್ಕಾಗಿ ಕೊರೋನಾ ಸೋಂಕು ಇಳಿಮುಖವಾದ ಮೇಲೆಯೆ ದಿನ ಪೂರ್ತಿ ತೆರೆದಿಡಲಾಗುದು ಎಂದು ತಿಳಿಸಿದರು. ಬಸದಿ ಸುತ್ತ ಒಳ ಚರಂಡಿ ವ್ಯೆವಸ್ಥೆ, ನೀರಿನ ಸರಾಗವಾಗಿ ಹೊರಗಡೆ ಹೋಗಲು ವ್ಯೆವಸ್ಥೆ ಬಸದಿ ಒಳಾಂಗ ಣ ಜೀರ್ಣೋದ್ದಾರ 2 ಮೇಗಿನ ನೆಲೆ ತಾಮ್ರ ಮುಡಾಯಿಸಲು ಈ ಹಿಂದೆ2018 ರಲ್ಲಿ 2 ಕೋಟಿ ಅನುದಾನ ಕರ್ನಾಟಕ ಸರಕಾರ ಘೋಷಣೆ ಮಾಡಿ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾಗಿತ್ತು .ಆದರೆ ಕೊರೋನಾ ಕಾರಣ ನೀಡಿ ಕಾಮಗಾರಿ ವಿಳಂಬ ವಾಗಿದೆ. ಆದಷ್ಟು ಬೇಗ ಕಾಮಗಾರಿ ಪರಂಪರೆಗೆ ಪೂರಕವಾಗಿ ಆರಂಭಗೊಳ್ಳಲು ಸರಕಾರ ಕ್ರಮ ಕೈಗೊಳ್ಳಬೇಕು, ಈ ಬ್ರಹತ್ ಜಿನ ಮಂದಿರ ಮತ್ತೊಮ್ಮೆ ಯಾತ್ರಾರ್ಥಿಗಳಿಗೆ, ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸಿ ಕೊಡಲು ಸರಕಾರ ಸಹಕರಿಸಲಿ, ಎಂದು ತಮ್ಮ ಆಶಯ ವ್ಯೆಕ್ತ ಪಡಿಸಿದ್ದಾರೆ