ಮಂಗಳೂರು,(ಡಿಸೆಂಬರ್ 31):- ಪ್ರಸ್ತುತ ಸಾಲಿನ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಹಾಗೂ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಜನವರಿ 20 ರವರೆಗೆ ವಿಸ್ತರಿಸಲಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್‍ಸೈಟ್ www.dom.karnataka.gov.in ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಅಝಾದ್ ಭವನ ಓಲ್ಡ್‍ಕೆಂಟ್ ರೋಡ್ ಪಾಂಡೇಶ್ವರ ಮಂಗಳೂರು ದೂ.ಸಂ: 0824-2433078, ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ವಾಯುಮಾಲಿನ್ಯ ತಪಾಸಣಾ ಕಟ್ಟಡ, ಮಿತ್ತಬೈಲ್ ಬಂಟ್ವಾಳ ದೂ.ಸಂ:08255-232470, ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ತಾಲೂಕು ಪಂಚಾಯತ್ ಕಟ್ಟಡ, ಸಾಮಥ್ರ್ಯಸೌಧ, ಒಂದನೇ ಮಹಡಿ, ಪುತ್ತೂರು ದೂ.ಸಂ: 08251-237078, ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಪಂಚಾಯತ್ ಕಟ್ಟಡ ಕೈಗಾರಿಕಾ ಇಲಾಖೆ ಹತ್ತಿರ ಬೆಳ್ತಂಗಡಿ ದೂ.ಸಂ: 08256-233336, ಸುಳ್ಯ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ತಾಲೂಕು ಪಂಚಾಯತ್ ಕಟ್ಟಡ, ಜೂನಿಯರ್ ಕಾಲೇಜು ಎದುರುಗಡೆ, ದೂ.ಸಂ 08257-230666 ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.